ಪಾಲಕ್ ಪೂರಿ

ಬೇಕಾಗುವ ಪದಾರ್ಥಗಳು :

ಗೋಧಿ ಹಿಟ್ಟು 250 ಗ್ರಾಂ
ಹಸಿಮೆಣಸಿನ ಕಾಯಿ 5
ಪಾಲಕ್ ಸೊಪ್ಪು 3 ಕಂತೆ
ಉಪ್ಪು ರುಚಿಗೆ
ಎಣ್ಣೆ ಕರಿಯಲು

ಮಾಡುವ ವಿಧಾನ :

ಪಾಲಕ್ ಪೂರಿಯನ್ನು ತಯಾರಿಸಲು ಮೊದಲು ಸೊಪ್ಪಿಗೆ ಸ್ವಲ್ಪ ಉಪ್ಪು ಬೆರೆಸಿ ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಒಂದು ಬಾಣಲಿಗೆ ನೀರು ಹಾಕಿ ಕುದಿ ಬಂದ ನಂತರ ಪಾಲಕ್ ಸೊಪ್ಪು ಹಾಕಿ ಬೇಯಿಸಿ. ಸೊಪ್ಪು ಬಹಳ ಬೇಗ ಬೆಂದುಹೋಗುವುದು. ಬೆಂದ ಸೊಪ್ಪು ಆರಿದ ನಂತರ ಜೀರಿಗೆ, ಹಸಿಮೆಣಸಿನಕಾಯಿ, ತೊಳೆದು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಗೋಧಿ ಹಿಟ್ಟನ್ನು ಜರಡಿ ಮಾಡಿಕೊಂಡು ಪಾಲಕ್ ಮಿಶ್ರಣ ಮತ್ತು ಉಪ್ಪು, ಸ್ವಲ್ಪ ಕಾದ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲೆಸಿ. ಚಪಾತಿ ಹಿಟ್ಟಿನಂತೆ ಕಲೆಸಿದ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಳ್ಳಿ. ಕಾದ ಎಣ್ಣೆಗೆ ಹಾಕಿ ಪೂರಿಯನ್ನು ಕರಿಯಬೇಕು. ನಿಮಗೆ ಇಷ್ಟವಾದ ಚಟ್ನಿಯ ಜತೆ ಪೂರಿಯನ್ನು ಸವಿಯಲು ಕೊಡಿ.

ಇದರ ಉಪಯೋಗಗಳು :

ಪಾಲಕ್ ಸೊಪ್ಪಿನಲ್ಲಿ ಅಧಿಕವಾದ ಜೀವಸತ್ವಗಳು ಇರುವುದು, ಮುಖ್ಯವಾಗಿ ಕಬ್ಬಿಣದ ಅಂಶ ಅಧಿಕವಾಗಿ ಇರುವುದರಿಂದ ರಕ್ತವು ಶುದ್ಧಿಯಾಗುವುದು, ರಕ್ತವು ವೃದ್ಧಿಯಾಗುವುದು ಎಣ್ಣೆಯಲ್ಲಿ ಕರಿದ ಅಡುಗೆ ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಮಕ್ಕಳು ಪೂರಿಯನ್ನು ತಿನ್ನುವಾಗ ಖುಷಿಪಡುವರು

LEAVE A REPLY

Please enter your comment!
Please enter your name here