ಶಾಲಾ, ಕಾಲೇಜಿಗೆ ಹೋಗುವಾದ ಯೂನಿಫಾಂ  ಆಫೀಸಿಗೆ ಹೋರಟರೆ ಫಾರ್ಮಲ್ಡ್ರೆಸ್‌… ಫಂಕ್ಷನ್‌ಗಳಿಗಾದರೆ ಪಾರ್ಟಿ ವೇರ್…ಮನೆಯ ಬಳಿ ಇದ್ದರೆ ಸಾಮಾನ್ಯಡ್ರೆಸ್‌ಗಳು. ರಾತ್ರಿ ಹೊತ್ತಲ್ಲಿ ನೈಟ್ ಡ್ರೆಸ್. ಹೀಗೆ ನಾವು ಧರಿಸುವ ಬಟ್ಟೆಗಳು ಆಯಾಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಧರಿಸುವಬಟ್ಟೆಗಳು ಮಾತ್ರ ಬೆಳ್ಳಗಿರುತ್ತವೆ. ಅದೇ ರೀತಿ ಅವರು ಶಸ್ತ್ರಚಿಕಿತ್ಸೆ ಮಾಡಿದರೆ ಎಲೆಹಸಿರು ಅಥವಾ ನೀಲಿ ಬಣ್ಣದ ವಸ್ತ್ರ ಧರಿಸುತ್ತಾರೆ. ಯಾಕೆ? ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯ ಸಂದರ್ಭಗಳಲ್ಲಾದರೆ ಬಿಳಿ ಬಣ್ಣದ ವಸ್ತ್ರಗಳನ್ನೇ ಬಳಸುತ್ತಾರೆ. ಯಾಕೆಂದರೆಬಿಳಿ ಸ್ವಚ್ಛತೆಗೆ, ಶುದ್ಧತೆಗೆ ಸಂಕೇತ. ಅವರು ಸಹ ಅದೇ ರೀತಿ ಇರಬೇಕು. ಹಾಗಾಗಿ ಬಿಳಿಬಣ್ಣದ ವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಆಪರೇಷನ್ ಸಮಯದಲ್ಲಿ ಮಾತ್ರ ಹಸಿರುಅಥವಾ ನೀಲಿ ಬಣ್ಣದ ವಸ್ತ್ರ ಧರಿಸುತ್ತಾರೆ. ಹಾಗಂತ ಇದೇನು ಹೊಸದಾಗಿ ಬಂದಟ್ರೆಂಡ್ ಏನೂ ಅಲ್ಲ. 20ನೇ ಶತಮಾನದಲ್ಲಿ ಆರಂಭದಲ್ಲಿ ವೈದ್ಯರೊಬ್ಬರು ಈವಿಧಾನವನ್ನು ಆರಂಭಿಸಿದರು.

ಈ ವಿಧಾನದ ಪ್ರಕಾರ ವೈದ್ಯರು ಆಪರೇಷನ್ ಸಮಯದಲ್ಲಿ ಗ್ರೀನ್ ಅಥವಾ ಬ್ಲೂಬಣ್ಣದ ವಸ್ತ್ರಗಳನ್ನು ಧರಿಸಬೇಕು. ಹಾಗೆ ಮಾಡುವುದರಿಂದ ಕೆಂಪು ಬಣ್ಣದಲ್ಲಿರುವರೋಗಿಯ ಅವಯವಗಳನ್ನು, ಅವುಗಳ ಬಣ್ಣಗಳನ್ನು, ಬದಲಾವಣೆಗಳನ್ನುಸುಲಭವಾಗಿ ಗುರುತಿಸಬಹುದು.

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹೆಚ್ಚಿನ ಹೊತ್ತು ರಕ್ತವನ್ನು, ಕೆಂಪುಬಣ್ಣವನ್ನು ನೋಡುತ್ತಾರೆ. ಆದಕಾರಣ ಈ ಬಣ್ಣವನ್ನು ನೋಡಿದ ಬಳಿಕ ಉಳಿದಬಣ್ಣಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಒಂದು ವೇಳೆ ಬಿಳಿ ವಸ್ತ್ರ ಧರಿಸಿದರೆವೈದ್ಯರಿಗೆ ಎಲೆ ಹಸಿರು ಬಣ್ಣದ ಗೆರೆಗಳು ಇಲ್ಯೂಷನ್ ರೂಪದಲ್ಲಿ ಪದೇಪದೇಕಾಣುತ್ತವಂತೆ. ಇದನ್ನು ನಿವಾರಿಸುವ ಸಲುವಾಗಿ ವೈದ್ಯರು ಎಲೆ ಹಸಿರು ಬಣ್ಣದವಸ್ತ್ರಗಳನ್ನು ಹೆಚ್ಚಾಗಿ ಧರಿಸುತ್ತಾರಂತೆ. ಇದರಿಂದ ಅವರಿಗೆ ಕಾಣಿಸುವ ಹಸಿರು ಬಣ್ಣದಗೆರೆಗಳು ಆ ಡ್ರೆಸ್‌ನಲ್ಲಿ ಬೆರೆತು ಕಣ್ಣಿಗೆ ಇತರೆ ಬಣ್ಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ.ಅದೇ ರೀತಿ ನೀಲಿ ಬಣ್ಣದ ವಸ್ತ್ರಗಳನ್ನು ಧರಿಸಿದರೂ ಈ ಸಮಸ್ಯೆಯಿಂದಹೊರಬೀಳಬಹುದು.

ಕೆಂಪು ಬಣ್ಣವನ್ನು ಹೆಚ್ಚಿನ ಸಮಯ ನೋಡಿದರೆ ಮಿದುಳಿನಲ್ಲಿ ಬಣ್ಣಗಳನ್ನುಗುರುತಿಸುವ ಸಂಕೇತಗಳು ಬಲಹೀನವಾಗುತ್ತವೆ. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಮಾಡುವ ಸಮಯದಲ್ಲಿ ವೈದ್ಯರು ತಾವು ಧರಿಸಿದ ಎಲೆ ಹಸಿರು, ನೀಲಿ ಬಣ್ಣದಬಟ್ಟೆಗಳನ್ನು ನಡುನಡುವೆ ನೋಡುವ ಸಲುವಾಗಿ ಈ ವಿಧಾನವನ್ನುಕಂಡುಕೊಂಡಿದ್ದಾರೆ.

ಇಟಲಿಯಲ್ಲಿನ ಯೂನಿವರ್ಸಿಟಿ ಆಫ್ ಪಡೋವಾದಲ್ಲಿನ ವಿಜುವಲ್ ಇಲ್ಯೂಷನ್ಸ್ಎಂಬ ವಿಷಯದ ಬಗ್ಗೆ ಸಂಶೋಧನೆ ಮಾಡಿದ ಪೌಲಾ ಬ್ರೆಸ್ಸಾನ್ ಎಂಬ ತಜ್ಞ ಸಹಇದೇ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಹಾಗಾಗಿ ಆಪರೇಷನ್ ಮಾಡುವ ಸಮಯದಲ್ಲಿವೈದ್ಯರು ಗ್ರೀನ್, ಬ್ಲೂ ಬಣ್ಣದ ವಸ್ತ್ರಗಳನ್ನು ಯಾಕೆ ಧರಿಸುತ್ತಾರೆ ಅಂತ ಈಗತಿಳಿಯಿತಲ್ಲವೇ?

LEAVE A REPLY

Please enter your comment!
Please enter your name here