ಇದು ನೇಪಾಳದ ಬಾಲಕನ ನೋವಿನ ಕಥೆ… ಈತನ ಚರ್ಮವು ದಪ್ಪವಾಗುತ್ತಾ ಹೋಗಿ ಕಲ್ಲಿನಷ್ಟು ಗಟ್ಟಿಯಾಗುತ್ತಾ ಇದೆ. ಸಾಮಾನ್ಯ ಮಕ್ಕಳು ಅಂಗಳದಲ್ಲಿ ಆಟವಾಡುತ್ತಾ ಕುಳಿತ್ತಿದ್ದರೆ ಈ ಬಾಲಕ ಹಾಸಿಗೆ ಮೇಲೆ ಮಲಗಿಕೊಂಡೇ ಇದ್ದಾನೆ.

ವೈದ್ಯಲೋಕ ಹಾಗೂ ವಿಜ್ಞಾನ ಎಷ್ಟೇ ಮುಂದುವರಿದರೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಾ ಇಲ್ಲ. ಹಲವಾರು ಮಾರಕ ರೋಗಗಳು ಮನುಷ್ಯರನ್ನು ಕಾಡುತ್ತಲೇ ಇದೆ. ಆದರೆ ಇದಕ್ಕೆ ಸಂಪೂರ್ಣ ಚಿಕಿತ್ಸೆ ಎನ್ನುವುದು ಇದುವರೆಗೆ ಸಿಕ್ಕಿಲ್ಲ. ಸಂಶೋಧನೆಗಳು ನಡೆಯುತ್ತಾ ಇದ್ದರೂ ರೋಗಗಳು ಹಾಗೆ ಉಳಿದುಕೊಂಡಿದೆ. ಹೊಸ ಹೊಸ ರೋಗಗಳು ಆಗಾಗ ವೈದ್ಯ ಲೋಕಕ್ಕೆ ಸವಾಲಾಗುತ್ತಾ ಇದೆ. ನೇಪಾಳದ ಹುಡುಗನೊಬ್ಬನ ಸಮಸ್ಯೆ ಕೂಡ ವೈದ್ಯ ಲೋಕವನ್ನು ಅಚ್ಚರಿಗೀಡು ಮಾಡಿದೆ. ಬಾಲಕನ ಚರ್ಮವು ದಪ್ಪವಾಗುತ್ತಾ ಹೋಗಿ ಕಲ್ಲಿನಷ್ಟು ಗಟ್ಟಿಯಾಗುತ್ತಾ ಇದೆ. ಸಾಮಾನ್ಯ ಮಕ್ಕಳು ಅಂಗಳದಲ್ಲಿ ಆಟವಾಡುತ್ತಾ ಕುಳಿತ್ತಿದ್ದರೆ ಈ ಬಾಲಕ ಹಾಸಿಗೆ ಮೇಲೆ ಮಲಗಿಕೊಂಡೇ ಇದ್ದಾನೆ. ಈತನಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಮದ್ದೇ ಇಲ್ಲದೆ ಇರುವ ಇಂತಹ ಕಾಯಿಲೆಗಳು ಜೀವನವನ್ನು ನರಕವಾಗಿಸುತ್ತದೆ. ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಾ ಇದ್ದರೂ ಇದಕ್ಕೆ ಸಂಪೂರ್ಣ ಪರಿಹಾರವಿಲ್ಲವೆನ್ನುತ್ತಾರೆ ವೈದ್ಯರು. ಬಾಲಕ ಮತ್ತು ಆತನ ಸಮಸ್ಯೆ ಬಗ್ಗೆ ಮತ್ತಷ್ಟು ತಿಳಿಯಲು ಓದುತ್ತಾ ಸಾಗಿ.

ಆತ 11ರ ಹರೆಯದ ಬಾಲಕ

11ರ ಹರೆಯದ ರಮೇಶ್ ಎಂಬ ಬಾಲಕ ಇಚ್ಛಿಯೊಸೀಸ್ ಎನ್ನುವ ಕಾಯಿಲೆಯಿಂದ ಬಳಲುತ್ತಾ ಇದ್ದಾನೆ. ಈ ಕಾಯಿಲೆಯಿಂದ ಮೈ ತುಂಬಾ ದಪ್ಪಗಿನ ಹಾಗೂ ಉದ್ದಗಿನ ಚರ್ಮವು ನಿರ್ಮಾಣವಾಗುತ್ತದೆ. ಆತನಿಗೆ ಸಾಮಾನ್ಯ ಬದುಕಿಲ್ಲ ಆತನನ್ನು ಈ ರೋಗವು ಸಂಪೂರ್ಣವಾಗಿ ಆವರಿಸಿಕೊಂಡಿರುವ ಕಾರಣದಿಂದ ನಡೆದಾಡಲು ಮತ್ತು ಮಾತನಾಡಲು ಸಾಧ್ಯವಾಗುತ್ತಿಲ್ಲ. ಆತನ ತಾಯಿ ಹೇಳುವಂತೆ ಮಗು ಹುಟ್ಟಿದ 15 ದಿನಗಳಲ್ಲಿ ಚರ್ಮ ಕಿತ್ತುಹೋಗಲು ಆರಂಭವಾಯಿತು ಮತ್ತು ಹೊಸ ಚರ್ಮವು ತುಂಬಾ ದಪ್ಪಗೆ ಇತ್ತು. ಇದು ತುಂಬಾ ಗಡುಸಾಗುತ್ತಾ ಕಪ್ಪು ಬಣ್ಣಕ್ಕೆ ತಿರುಗಿತು. ಏನು ಮಾಡಬೇಕೆಂದು ನಮಗೆ ಅರ್ಥವಾಗುತ್ತಿಲ್ಲ ಮತ್ತು ಯಾರೂ ನೆರವಿಗೆ ಬಂದಿಲ್ಲ. ಈ ಕಾಯಿಲೆಗೆ ಮದ್ದಿಲ್ಲ ಈ ಕಾಯಿಲೆಗೆ ಯಾವುದೇ ಮದ್ದಿಲ್ಲವೆಂದು ವೈದ್ಯರೂ ಕೂಡ ಹೇಳಿದ್ದಾರೆ. ಆದರೆ ದಿನಾಲೂ ಚರ್ಮದ ಆರೈಕೆ ಮತ್ತು ಔಷಧಿಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು.

ಕೊನೆಗೆ ಬಿಟ್ರನ್‌ನ ಗಾಯಕಿ ಜಾಸ್ ಸ್ಟೋನ್ ನೆರವಾದಳು

ಬಾಲಕನ ಖರ್ಚಿಗೆ ಬೇಕಾದಷ್ಟು ಹಣವನ್ನು ನೀಡಲು ಬ್ರಿಟನ್ ನ ಗಾಯಕಿ ಜಾಸ್ ಸ್ಟೋನ್ ಮುಂದಾಗಿದ್ದಾಳೆ. ಆತನ ಚಿಕಿತ್ಸೆಗಾಗಿ ಸುಮಾರು 1,375 ಡಾಲರ್ ಸಂಗ್ರಹಿಸಿಕೊಟ್ಟಿದ್ದಾಳೆ. ಸಂಪೂರ್ಣ ದಿನವನ್ನು ಬಾಲಕನೊಂದಿಗೆ ಕಳೆದಿರುವ ಆಕೆ ಉಡುಗೊರೆ ಹಾಗೂ ಚಾಕಲೇಟ್ ಗಳನ್ನು ನೀಡಿದ್ದಾಳೆ. ಆತನ ಬಗ್ಗೆ ಆಕೆಗೆ ಹೇಗೆ ತಿಳಿಯಿತು? ಬಾಲಕನಿಗೆ ನಡೆದಾಡಲು ಸಾಧ್ಯವಾಗದೆ ಇರುವುದು ಮತ್ತು ಆತನ ಕಷ್ಟವನ್ನು ಅರಿತುಕೊಂಡ ಆಕೆ ಕಾಠ್ಮಂಡೊದಲ್ಲಿ ಶೋ ಆಯೋಜಿಸಿ ಚಿಕಿತ್ಸೆಗಾಗಿ ಹಣ ಸಂಗ್ರಹಿಸಿದ್ದಾಳೆ. ಆತ ಚೇತರಿಸಿಕೊಳ್ಳುತ್ತಿದ್ದಾನೆ ಆತನನ್ನು ಆಸ್ಪತ್ರೆಗೆ ದಾಖಲಿಸಿದಾಗ ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದ. ಆತನ ಚರ್ಮವನ್ನು ತೆಗೆಯಲಾಗಿದೆ. ಇದು ತುಂಬಾ ನೋವನ್ನು ಉಂಟು ಮಾಡುತ್ತಾ ಇತ್ತು. ಆತನಿಗೆ ಎರಡು ವಾರಗಳ ತನಕ ಆ್ಯಂಟಿಬಯೋಟಿಕ್ ಕೊಟ್ಟು ಯಾವುದೇ ಸೋಂಕು ಆಗದಂತೆ ನೋಡಿಕೊಳ್ಳುತ್ತೇವೆ. ಸತ್ತ ಚರ್ಮವನ್ನು ತೆಗೆಯಲು ಮೊಶ್ಚಿರೈಸರ್ ಮತ್ತು ಔಷಧಿ ಹಚ್ಚಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕ ಬೇಗನೆ ಚೇತರಿಸಿಕೊಳ್ಳಲಿ ಎಂದು ನಾವೆಲ್ಲರೂ ಪ್ರಾರ್ಥಿಸುವ. ಇದೇ ವೇಳೆ ಬಾಲಕನ ನೆರವಿಗೆ ಬಂದ ಜಾಸ್ ಸ್ಟೋನ್‌ಗೆ ಅಭಿನಂದನೆಗಳು

LEAVE A REPLY

Please enter your comment!
Please enter your name here