ಪುರುಷರು ಹೆಚ್ಚಾಗಿ ಅವರ ಮೊಬೈಲ್ ಫೋನ್ ಅನ್ನು ಜೇಬಿನಲ್ಲೆ ಇಟ್ಟುಕೊಳ್ಳುತ್ತಾರೆ ಇದರಿಂದ ಅವರ ದೇಹದಲ್ಲಿ ಸಾಕಷ್ಟು ತೊಂದರೆಗಳಾಗುತ್ತವೆ. ಮುಖ್ಯವಾಗಿ ವೀರ್ಯಕ್ಕೆ ಗಂಭೀರವಾದ ಹೊಡೆತ ಕೊಡುತ್ತದೆ ಎನ್ನುತ್ತಾರೆ ಸಂಶೋಧಕರು ಹಾಗಾದ್ರೆ ಹೇಗೆ ಅಂತೀರಾ ಈ ಸ್ಟೋರಿ ಓದಿ.

ಫರ್ಟಿಲೆಟಿ ತಜ್ಞರ ಪ್ರಕಾರ ಅವರ ಕ್ಲಿನಿಕ್ಗೆ ಭೇಟಿ ನೀಡುತ್ತಿದ್ದ 100 ಜನ ಪುರುಷರನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ಅರ್ಧ ಜನ ಜೇಬಿನಲ್ಲಿ ಮೊಬೈಲ್ ಇಡದೇ ಇರುವವರು ಮತ್ತು ಜೇಬಿನಲ್ಲಿ ಮೊಬೈಲ್ ಇಡುವವರನ್ನು ಅವರು ಪರೀಕ್ಷಿಸಿದಾಗ ದಿನಕ್ಕೆ ಒಂದು ಗಂಟೆಯವರೆಗೆ ತಮ್ಮ ಫೋನ್ಗಳನ್ನು ಬಳಸುವವರು ವೀರ್ಯಾಣು ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ.

ಜೇಬಿನಲ್ಲಿ ಫೋನ್ಗಳನ್ನು ಇಟ್ಟುಕೊಳ್ಳುವ ಪುರುಷರು 47% ರಷ್ಟು ಪ್ರಕರಣಗಳಲ್ಲಿ ಗಂಭೀರವಾಗಿ ಪರಿಣಾಮ ಬೀರಿತ್ತು. ಆದ್ದರಿಂದ ಆದಷ್ಟು ಪುರುಷರು ಮಲಗುವಾಗಲೂ ಸಹ ಸೆಲ್ ಫೋನ್ಗಳನ್ನು ಮಲಗುವ ಜಾಗದಿಂದ ಸ್ವಲ್ಪ ದೂರ ಇಟ್ಟು ಮಲಗುವುದು ಉತ್ತಮ ಏಕೆಂದರೆ ಇದರಿಂದ ಬಿಡುಗಡೆ ಆಗುವ ವೀಕಿರಣಗಳಿಂದ ನಪುಂಸಕತೆ ಬರುವ ಸಂಭವವಿರುತ್ತದೆ.

LEAVE A REPLY

Please enter your comment!
Please enter your name here