ಬಾಲ ಜ್ಯೋತಿಷ್ಯ
ನಿಮ್ಮ ಮಗು ಹಠಮಾರಿ ಹಾಗೂ ಸೋಮಾರಿಯೇ ಪ್ರಿಯ ಓದುಗರೇ ನಾವು ಇಂದು ನಿಮ್ಮೊಡನೆ ಮಕ್ಕಳಲ್ಲಿ ಅಂದರೆ ಸುಮಾರು 5 ವರ್ಷದಿಂದ ಆರಂಬಿಸಿ 16 ವರ್ಷದ ವರೆಗೂ ಕಾಣುವ ಹಠಮಾರಿತನ ಹಾಗು ಸೋಮಾರಿತನ ಇದರ ಬಗ್ಗೆ ವಿಶ್ಲೇಷಣೆ ಮಾಡಲು ಬಯಸುತ್ತೇವೆ, ಪ್ರಿಯ ಓದುಗರೇ ಈ ಮೇಲೆ ತಿಳಿಸಿದ ಸಮಸ್ಯೆಯ ಬಗ್ಗೆ ನಾವು ನಮ್ಮ ಅನೇಕ ವರ್ಷಗಳ ವೈದಿಕ ಜ್ಯೋತಿಷ್ಯ, ನಾಡಿ ಜ್ಯೋತಿಷ್ಯ, ಹಾಗು ತಂದೆ ತಾಯಿ ಮಕ್ಕಳು ವಾಸಿಸುವ ವಸಸ್ತಲದ ವಾಸ್ತು ಹಾಗು ಮಕ್ಕಳು ಜನಿಸಿರುವ ಜನ್ಮ ದಿನಾಂಕ ಮತ್ತು ಸಮಯ ಇತ್ಯಾದಿಗಳ ಪ್ರಭಾವಗಳನ್ನು ವಿಶೇಷವಾಗಿ ಕಾಣಬಹುದಾಗಿದೆ, ಇದುವರೆಗೂ ನಾವು ನಿರ್ವೈಹಿಸಿರುವ ಅನೇಕ ಉದಾಹರೆಣೆಗಳಲ್ಲಿ ಕೆಲವೊಂದನ್ನು ನಿಮಗೆ ತಿಳಿಸಲಿಚ್ಚಿಸುತ್ತೇವೆ.

ಉದಾಹರಣೆ 1
ಕಲಾವತಿ ಹಾಗು ರಾಮಪ್ರಸಾದ್ ದಂಪತಿಗಳು ಬೆಂಗಳೂರು
ನಮ್ಮ ಬಳಿಯಲ್ಲಿ ಬಂದು ಅವರ ಸಮಸ್ಯೆಯನ್ನು ಹೇಳುತ್ತಾರೆ ಅವರಿಗೆ ಅವರ ಒಬ್ಬನೇ ಒಬ್ಬ ಗಂಡು ಮಗುವಿನ ಬಗ್ಗೆ ಸದಾ ಚಿಂತೆ ಕಾಡುತ್ತದೆ, ಆ ಬಾಲಕನಿಗೆ ಸುಮಾರು ೧೩ ವರ್ಷಗಳಾಗಿದ್ದು 7 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುತ್ತಾನೆ, ಅವನ ಸಮಸ್ಯೆ ಸೋಮಾರಿತನ, ಓದಿನ ಕಡೆಗೆ ಗಮನವಿಲ್ಲದಿರುವುದು, ವಿದ್ಯಬ್ಯಾಸದಲ್ಲಿ ಪ್ರಗತಿ ಕಾಣುತ್ತಿರಲ್ಲಿಲ್ಲ, ಹಾಗು ಪರೀಕ್ಷೆಗಳಲ್ಲಿ ಅಂದರೆ ಪ್ರತಿ ತತಿಂಗಳು ನಡೆಯುವ ಟೆಸ್ಟ್ ಗಳಲ್ಲಿ ಅನುತ್ತಿರ್ಣ ಸರಿಯಾಗಿ ಊಟ ಮಾದುತ್ತಿಲಿಲ್ಲ ಹಾಗು ಗುರು ಹಿರಿಯರಿಗೆ ಗೌರವ ನೀದುತ್ತಿರಲ್ಲಿಲ್ಲ ಎದುರುತ್ತರ ಕೂಡುವುದು ಈ ಬಾಲಕನ ಸಮಸ್ಯೆಯಾಗಿತ್ತು, ಪೋಷಕರಿಗೆ ಈ ವಿಷಯದಲ್ಲಿ ಬಹಳ ನೋವು, ಅವರು ತಮ್ಮ ಮಗನ ಬಗ್ಗೆ ಅವನ ಅಬ್ಯೋದಯದಬಗ್ಗೆ ಪ್ರಾಣವನ್ನೇ ಇಟ್ಟು ಕೊಂಡಿದ್ದಾರೆ ಆದರಿಂದ ಅವನ ಮುಂದಿನ ಭವಿಷ್ಯ ಹಾಗು ಜೀವನ ಇವಗಳನ್ನು ನೆನೆದು ಬಹಳ ದುಖಿತರಾಗಿದ್ದಾರೆ.

ಉದಾಹರಣೆ 2
ರಾಜೇಶ್ವರಿ ಹಾಗು ಪ್ರಸನ್ನ ದಂಪತಿಗಳು
ತಮ್ಮ ಮಗ ವಿನಯ್ ವಯಸ್ಸು 16 ವರ್ಷ ಹಾಗು ೧೦ನೆ ತರಗತಿಯಲ್ಲಿ ಓದುತಿರ್ರುತ್ತಾನೆ. ಈ ಪೋಷಕರದ್ದು ಒಂದು ವಿಚಿತ್ರವಾದ ಸಮಸ್ಯೆ, ಇವರ ಮಗ ವಿನಯ್ ಹೆಸರಿಗೆ ತಕ್ಕಂತೆ ಚಿಕ್ಕ ವಯಸ್ಸಿನಿಂದಲೂ ಅಂದರೆ ಸುಮಾರು ನುರ್ಸರಿ ಹಾಗು ಒಂದನೇ ತರಗತಿಯಿಂದಲೂ ಬಹಳ ಚುರುಕಾಗಿ ಎಲ್ಲರ ಮನಸನ್ನು ಸಂತೋಷ ಪಡಿಸುವಂತ ಮುದ್ದಾದ ಮಾತುಗಳು ಹಾಗು ಒದಿನಲ್ಲಿ ಉತ್ತಮ ಸಾಧನೆ ಆಟ ಪಾಟಗಳಲ್ಲಿ ಉತ್ತಮ ಅಭಿರುಚಿ ಸರಿಯಾದ ಆಹಾರ ಸೇವನೆ ಅತ್ಯಂತ ಉತ್ತಮ ಚುರುಕುತನ ಉಳ್ಳವನಾಗಿದ್ದನು, ಆದರೆ ಕಾಲಕ್ರಮೇಣ ಹೈ ಸ್ಕೂಲ್ ಗೆ ಪ್ರವೇಶಿಸುತ್ತಿದಂತೆ ನಿಧಾನವಾಗಿ ಅವನಲ್ಲಿ ಅನೇಕ ಬದಲಾವಣೆಗಳಾಗುವುದನ್ನು ಅವನ ತಂದೆ ತಾಯಿ ಗಮನಿಸಿದರು ಅವರು ಮೊದಲು ಹುಡುಗುತನವೆಂದು ಹೆಚ್ಚು ತಲೆಕೆಡಿಸಿಕೊಂಡಿರಲ್ಲಿಲ್ಲ ಆದರೆ 6-7 ತಿಂಗಳಲ್ಲಿ ಅವನ ವರ್ತನೆಯಲ್ಲಿ ಭಾರಿ ವ್ಯತ್ಯಾಸ ಕಂಡರ ವಿನಯವಂತನಾಗಿದ್ದ ವಿನಯ್ ಅವಿನಯಥನವನ್ನು ಅವಿಧೆಯತೆಯನ್ನು ಹಾಗು ಹಠಮಾರಿ ಪ್ರವೃತ್ತಿಯನ್ನು ತೋರಿಸಲು ಆರಂಭಿಸಿದನು ಹಾಗು ಪೋಲಿ ಹುಡುಗರ ಸ್ನೇಹವನ್ನು ಬೆಳೆಸತೊಡಗಿದನು ಸದಾ ಟಿ ವಿ ಹಾಗು ಮೊಬೈಲ್ ಗೇಮ್ನಲ್ಲಿ ತೊಡಗುವುದು, ಹಾಗು ಪೋಲಿ ಹುಡುಗರ ಜೊತೆ ಬೀದಿ ಸುತ್ತುವುದೆ ಇವನಿಗೆ ದುಶ್ಚಟವಾಗಿ ರೂಪುಗೊಂಡಿತ್ತು. ಇದನ್ನು ನೋಡಿ ಅವರ ತಂದೆ ತಾಯಿಗಳಿಗೆ ತಮ್ಮ ಮಗನ ಭಯಂಕರ ಭವಿಷ್ಯ ಕಾಣಲಾರಮ್ಬಿಸಿತು, ಇದನ್ನು ನೋಡಿ ಚಿಂತಿತರಾದ ತಂದೆ ತಾಯಿ ನಮ್ಮ ಬಳಿ ತಮ್ಮ ಸಮಸ್ಯೆಯನ್ನು ತಂದರು.

ಉದಾಹರಣೆ 3
ದಂಪತಿ ಸುಮತಿ ಹಾಗು ಗೌತಮ್
ತಮ್ಮ ಹೆಣ್ಣು ಮಗಳ ಹೆಸರು ಪ್ರಿಯಂವದ ಸ್ತಳ ಅಮೇರಿಕಾ ದೇಶ, ಈ ಬಾಲಕಿಯ ವಯಸ್ಸು ಸುಮಾರು 14 ವರ್ಷ ಸಮಸ್ಯ ಮನೆಯಲ್ಲಿನ ಯಾವ ಸದಸ್ಯರು ಅಂದ್ರೆ ತಮ್ಮ ತಾಯಿ ತಂದೆ ಅಜ್ಜಿ ತಾತ ಇತರ ಯಾವ ಸಂಬಂಧಗಳನ್ನು ಹಂಚಿ ಕೊಳ್ಳುತ್ತಿರಲ್ಲಿಲ್ಲ ಮನೆಯ ಯಾವ ಶುಭ ಕಾರ್ಯಗಳಲ್ಲಿಯೂ ಪಾಲ್ಗೊಳ್ಳದಿರುವುದು ಹಾಗು ತಾನೊಬ್ಬಳೆ ಒಂಟಿಯಾಗಿ ಒಂದು ರೂಮ್ನಲ್ಲಿ ಇರಲು ಇಷ್ಟಪಡುವುದು, ಹಾಗು ಊಟ ಮಾಡದೆ ಜಂಕ್ ಫುಡ್ಅನ್ನೇ ತನ್ನ ಆಹಾರವಾಗಿ ತಿನ್ನುವುದು, ಹಾಗು ವಿಚಿತ್ರ ಸಮಸ್ಯೆ ಎಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ದುಷ್ಟ ಸಹವಾಸದಿಂದ ಡ್ರಗ್ ಅಡಿಕ್ಟ್ ಕೂಡ ಆಗಿರುತ್ತಾಳೆ ಹಾಗು ಇದ್ದಕಿದ್ದಂತೆ ಅತ್ಯಂತ ಭಯ ಬೀತಿ ಗೊಳ್ಳುವುದು ಹಾಗು ಜೋರಾಗಿ ಅಳುವುದು ಪ್ರಜ್ಞೆ ತಪ್ಪಿ ಬೀಳುವುದು ಪುನಃ ಎದ್ದ ಮೇಲೆ ತನಗೆ ವಿಚಿತ್ರ ಏಕಾಂಗಿ ತನ ಕಾಡುತ್ತಿದೆ ವಿಚಿತ್ರ ಆಕೃತಿಗಳು ತನ್ನ ಸುತ್ತ ಕಾಡುತ್ತಿವೆ ಭಯ ವಾಗುತ್ತದೆ ಎಂದು ತಾಯಿಯನ್ನು ಅಪ್ಪಿಕೊಂಡು ಜೋರಾಗಿ ಅಳುವುದು, ಹಾಗು ವಿನಾಕಾರಣ ತನ್ನ ತಂದೆ ತಾಯಿಯನ್ನ ಅತ್ಯಂತ ಕೆಟ್ಟ ಪದಗಳಿಂದ ಕ್ರುಷಣೆ ಮಾಡುವುದು ಇದನ್ನು ಗಮನಿಸಿದ ತನ್ನ ತಂದೆ ತಾಯಿ ನಮ್ಮ ಬಳಿಯಲ್ಲಿ ಸಮಸ್ಯೆಯನ್ನು ಹೇಳಿದಾಗ ನಾವು ಸಹ ಕೆಲ ಹೊತ್ತು ತಂದೆ ತಾಯಿಗಳ ನೋವಿನೆ ಬಗ್ಗೆ ದುಃಖಿಸಿದ್ದು ನಿಜ.

ಓದುಗರೇ ಈ ಮೇಲೆ ತಿಳಿಸಿದ ಮೂರು ಉದಾಹರಣೆಗಳನ್ನು ಹಾಗು ಅನೇಕ ಅಂದರೆ ಇನ್ನು ನೂರಾರು ಉದಾಹರಣೆಗಳನ್ನು ನಾವು ನೀಡಬಹುದು ಇದನ್ನು ಇಲ್ಲಿ ಪ್ರಸ್ತುತ ಪಡಿಸುವ ಉದ್ದೇಶ ಏನೆಂದರೆ ನಮ್ಮ ಮೂಲ ಉದ್ದೇಶವಾದ ಜೋತಿಷ್ಯ ಶಾಸ್ತ್ರದಲ್ಲಿ ಬಾಲ ಜೋತಿಷ್ಯ ಎಂಬ ವಿಭಾಗವನ್ನು ಮಾಡಿದರೆ ಚಿಕ್ಕ ಮಕ್ಕಳಿಗೆ ಯಾವ ತರಹದ ಸಮಸ್ಯೆಗಳು ಕಾಡುತ್ತವೆ ಹಾಗು ಅದಕ್ಕೆ ವೈದ್ಯಕೀಯವಾಗಿ ಎಲ್ಲ ಟ್ರೀಟ್ಮೆಂಟ್ ಗಳು ಕೊಡಿಸಿಯು ಸಹ ಆ ಮಕ್ಕಳಲ್ಲಿ ಯಾವ ಬದಲಾವಣೆಯು ಇಲ್ಲದೆ ಸಮಸ್ಯೆ ಮುಂದೆ ಹಾಗೆ ಇದ್ದರೆ ಆಗ ಜ್ಯೋತಿಷ್ಯ ಶಾಸ್ತ್ರ ಸಂಖ್ಯಾ ಶಾಸ್ತ್ರ ಹಾಗು ವಾಸ್ತು ಶಾಸ್ತ್ರ ಇದಕ್ಕೆ ಯಾವ ರೀತಿ ಪರಿಹಾರವನ್ನು ನೀಡಬಹುದು ಎಂಬುದನ್ನು ತಿಳಿಸುವುದಾಗಿದೆ. ಆ ರೀತಿಯಲ್ಲಿ ನಾವು ನೋಡಿದಾಗ ಒಂದು ಮಗುವು ಜನಿಸಿದ ಸಮಯದಲ್ಲಿ ಅಶುಭಾಗ್ರಹಗಳ ಪ್ರಭಾವ ಅದರ ವಿವಿಧ ಶೋಡಷ ಕುಂಡಲಿಗಳಲ್ಲಿ ನವಗ್ರಹಗಳ ಸ್ತಿತಿ ಬಹಳ ಪ್ರಭಾವವನ್ನು ಬೀರುತ್ತವೆ, ವಿಶೇಷವಾಗಿ ಗ್ರಹಗಳಲ್ಲಿ ಮಾಂಬಿ ಹಾಗು ಶನೈಶ್ವರ ಸ್ವಾಮಿ ಹಾಗು ರಾಹು ಕೇತು ಹಾಗು ಇನ್ನಿತರ ಎಲ್ಲ ಗ್ರಹಗಳ ಗೋಚಾರ ಫಲ ಹಾಗು ಜನ್ಮ ದಿನಂಕದಲ್ಲಿನ ಸಾಧಾರಣ ಬಲ ಹಾಗು ಒಂದು ಮಗುವಿಗೆ ಅದಕ್ಕೆ ಉಚಿತವಲ್ಲದ ದಿಕ್ಕಿನಲ್ಲಿ ಮಲಗುವ ಹಾಗು ಓದುವ ಸ್ತಳವನ್ನು ನೀಡುವುದು ಹಾಗು ಅದರ ದಿನನಿತ್ಯದ ಜೀವನದಲ್ಲಿ ತಂದೆ ತಾಯಿಗಳು ಅದರ ಜಾತಕದ ಅನುಸಾರ ಯಾವ ಗ್ರಹದ ಹಾಗು ದೈವದ ಪೂಜೆ ಪ್ರಾರ್ಥನೆ ಮಾಡಿದರೆ ಅದಕ್ಕೆ ಅತ್ಯಂತ ಶಿಗ್ರವಾಗಿ ಶುಭ ಪಲಗಳು ಪ್ರಾಪ್ತಿಯಾಗುವುದು ಎಂದು ವಿಸ್ತರಿಸಬಹುದಾಗಿದೆ ಹಾಗು ಯಾವ ದೈವ ಮಗುವಿಗೆ ಶೀಘ್ರವಾಗಿ ಒಲಿದು ಪ್ರಸನ್ನವಾಗುವುದು ಹಾಗು ಎಲ್ಲ ಕೆಲಸ ಹಾಗು ಓದು ಇನ್ನಿತರ ಚಟುವಟಿಕೆಗಳಲ್ಲಿ ಮಗುವಿಗೆ ಜಯ ಹಾಗು ಯಶಸನ್ನು ತಂದು ಕೊಡುವುದು ಹಾಗು ನೀವು ನಿಮ್ಮ ಮಗುವಿಗೆ ಇಟ್ಟಿರುವ ಹೆಸರನ್ನು ನಿಮ್ಮ ಮಗುವಿಗೆ ಬಲಾ ನೀಡಬಲ್ಲದೆ ಹಾಗು ನಿಮ್ಮ ಮಗುವಿಗೆ ಬಲಯುತವಾದ ಹೆಸರನ್ನು ನೀಡುವಾಗ ಸಂಸ್ಕಾರ ಹಾಗು ಸರಿಯಾದ ಕ್ರಮದಲ್ಲಿ ನೀವು ನಿಮ್ಮ ಮಗುವಿಗೆ ನಾಮಕರಣವನ್ನು ಮಾಡಿದ್ದಿರೆ ಈ ಎಲ್ಲ ಅಂಶಗಳು ಹಾಗು ಇನ್ನಿತರ ಸೂಕ್ಷ್ಮ ಅತಿ ಸೂಕ್ಷ್ಮ ಅಂಶಗಳು ನಿಮ್ಮ ಮಕ್ಕಳ ಭವಿಷ್ಯ ಹಾಗು ಕಾರ್ಯ ಚಟುವಟಿಕೆ ವಿನಯ ವಿಧೇಯತೆ ಹಾಗು ಅವರ ವಿಧ್ಯಾಬ್ಯಾಸ ಹಾಗು ಯಸಸ್ವಿ ಜೀವನವನ್ನು ನಿರ್ಧರಿಸುತ್ತದೆ ಎಂಬುದನ್ನು ನಾವು ನಮ್ಮ ಅನುಭವ ಅಧ್ಯಯನ ಹಾಗು ಸಂಶೋಧನೆಯಿಂದ ಖಚಿತವಾಗಿ ಹೇಳಬಯಸುತ್ತೇವೆ ಆದ್ದರಿಂದ ನಿಮ್ಮ ಮಕ್ಕಳಿಗೆ ಈ ರೀತಿ ಸಮಸ್ಯೆಗಳಿದಲ್ಲಿ ಮೊದಲು ವೈದ್ಯರಲ್ಲಿ ತೋರಿಸಿ ಹಾಗು ಸಮಸ್ಯೆ ತೀರದಿದ್ದಲ್ಲಿ ತಡಮಾಡದೆ ನಿಮ್ಮ ಮಗುವಿನ ಜನ್ಮ ಸಮಯ ಸ್ಥಳ ಹಾಗು ದಿನಾಂಕವನ್ನು ತೆಗೆದುಕೊಂಡು ಅಥವಾ ಜಾತಕ ತೆಗೆದುಕೊಂಡು ಅದನ್ನು ಅನುಭವವುಳ್ಳ ನಿಪುಣ ಜೋತಿಶಿಗಳಲ್ಲಿ ತೋರಿಸಿ ನಿಮ್ಮ ಸಮಸ್ಯೆಗೆ ಅತ್ಯುತ್ತಮ್ಮ ಪರಿಹಾರವನ್ನು ತಿಳಿಸಬಯಸುತ್ತೇನೆ, ನಿಮ್ಮೆಲರಿಗೂ ಒಳ್ಳೆಯದಾಗಲೆಂದು ಆ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ.

LEAVE A REPLY

Please enter your comment!
Please enter your name here