ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಬೇಕೇ ಬೇಕಾಗಿರುತ್ತದೆ ಇಂತಹ ಸಂಧರ್ಭಗಳಲ್ಲಿ ತಮ್ಮ ಬಿಸಿನೆಸ್ ಗೆ ಅನೇಕರು ದುಡ್ಡು ಹೂಡಿ ಕಳೆದುಕೊಳ್ಳುವುದನ್ನು ನೋಡಿರುತ್ತೇವೆ, ಅಂತವರು ಈ ಕೆಳಗಿನ ರೀತಿಯಲ್ಲಿ ನಿಮ್ಮ ಆಫೀಸ್ ವಾಸ್ತು ಇರುವಂತೆ ನೋಡಿಕೊಳ್ಳಿ, ನಿಮಗೆ ಅನೇಕ ರೀತಿಯಾದ ವ್ಯಾವಹಾರಿಕ ಹಾಗು ಕಣಕಾಸಿನ ಅನುಕೂಲಗಳು ಹುಡುಕಿಕೊಂಡು ಬರಲಿವೆ.

ನೀವು ಹೊಸ ಮನೆ ಅಥವಾ ಫ್ಲಾಟ್ ಅನ್ನು ನಿಮ್ಮ ವ್ಯವಹಾರಕ್ಕೆ ಖರೀದಿಸಲು ಹೋದಲ್ಲಿ ಗೌಮುಖಿ ರೀತಿಯಾದ ಜಾಗವನ್ನು ಮರೆಯದೆ ಪಡೆಯಿರಿ, ಇದು ನಿಮ್ಮ ವ್ಯವಹಾರಕ್ಕೆ ರಕ್ಷೆ ನೀಡುತ್ತದೆ.

ನಿಮ್ಮ ಕಾರ್ಯಾಲಯ / ಆಫೀಸ್ ಯಾವಾಗಲೂ ಉತ್ತರಕ್ಕೆ, ಈಶಾನ್ಯಕ್ಕೆ ಅಥವಾ ವಾಯುವ್ಯ ಮುಖಕ್ಕೆ ಇರುವಂತೆ ನೋಡಿಕೊಳ್ಳಿ, ಇದು ನಿಮ್ಮ ವ್ಯವಹಾರಗಳಿಗೆ ಒಂದು ಚೈತನ್ಯ ತುಂಬುವ ಕೆಲಸ ಮಾಡುತ್ತದೆ, ಇದರಿಂದ ನಿಮ್ಮ ಧನಾಗಮನ ಘನೀಯವಾಗಿ ಜಾಸ್ತಿಯಾಗಲಿದೆ.

ನಿಮ್ಮ ಕಾರ್ಯಾಲಯದ ಬಾಗಿಲು ಯಾವಾಗಲೂ ಪೂರ್ವಕ್ಕೆ ಅಥವಾ ಉತ್ತರಕ್ಕೆ ಇದ್ದರೆ ಒಳಿತು ಯಾವುದೇ ಕಾರಣಕ್ಕೂ ಈ ಬಾಗಿಲಿನ ಬಳಿ ಅದೇ ತಡೆಯುಂಟಾಗುವಂತಾಗವನ್ನು ಇಡಬೇಡಿ.

ನಿಮ್ಮ ಆಫೀಸ್ ನ ವ್ಯವಹಾರ ಕ್ರಿಯೆ ನಡೆಯುವ ರೂಮ್ ಯಾವಾಗಲೂ ಪೂರ್ವ ದಿಕ್ಕಿನಲ್ಲಿ ಅಥವಾ ಈಶಾನ್ಯ ಮೂಲೆಯಲ್ಲಿ ಇರಲಿ.

ನಿಮ್ಮ ಆಫೀಸ್ ನ ಮಧ್ಯಭಾಗದಲ್ಲಿ ಯಾವುದೇ ಕಾರಣಕ್ಕೂ ಭಾರವಾದದ್ದನ್ನು ಇಡಬೇಡಿ ಆದಷ್ಟು ಆ ಪ್ರದೇಶ ಖಾಲಿ ಇರಲಿ.

ನಿಮ್ಮ ಆಫೀಸ್ ನ ಓನರ್ ಅಥವಾ ಒಡೆಯ ನ ಚೇಂಬರ್ ನೈಋತ್ಯ ಭಾಗದಲ್ಲಿ ಇದ್ದಾರೆ ಒಳಿತು ಹಾಗೆ ಅವ್ರು ಉತ್ತರಕ್ಕೆ ಮುಖಮಾಡಿ ಕುಳಿತದ್ದೇ ಆದರೆ ನಿಮ್ಮ ನಿಮ್ಮ ಕಂಪನಿ ವ್ಯವಹಾರಗಳು ದ್ವಿಗುಣಗೊಳ್ಳುತ್ತವೆ.

ನಿಮ್ಮ ಓಫೀಸ್ ನ ಉದ್ಯೋಗಿಗಳು ಉತ್ತರಕ್ಕೆ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತು ಕೆಲಸ ನಿರ್ವಹಿಸಿದರೆ ಒಳಿತು.

ನಿಮ್ಮಅಕೌಂಟ್ಸ್ ರೂಮ್ ನ ವಾಯುವ್ಯ ದಿಕ್ಕು ಆದಷ್ಟು ಖಾಲಿ ಇರಲಿ, ಇದರಿಂದ ನಿಮ್ಮ ವ್ಯವಹಾರ ಶ್ರೇಯಸ್ಕರವಾಗಿರಲಿದೆ.

LEAVE A REPLY

Please enter your comment!
Please enter your name here