ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿನ್ನೆ ಪ್ರಸಾರವಾದ ವೀಕೇಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಬಂದ ವಿಜಯ್ ಸಂಕೇಶ್ವರ್ ಅವರೇ ಅತ್ಯತ್ತಮ ಉದಾಹರಣೆ.ನಿನ್ನೆ ನಡೆದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಅವರು ಕಾಣಿಸಿಕೊಂಡ್ರು.ಈ ವೇಳೆ ಅವರ ಯಶಸ್ಸಿನ ಹಿನ್ನೆಲೆಯನ್ನು ಹಂಚಿಕೊಂಡ್ರು. ಸಾಧನೆ ಮಾಡಲು ಕೇವಲ ದುಡ್ಡು, ವಿದ್ಯೆ ಬೇಕಾಗಿಲ್ಲ. ಅದರ ಜತೆ ಶ್ರದ್ಧೆಯೂ ಅವಶ್ಯ ಎಂದು ಅವರು ಹೇಳಿದರು. ಜತೆಗೆ ತಮ್ಮ ಯಶಸ್ಸಿನ ಹಾದಿಯನ್ನು ಬಿಚ್ಚಿಟ್ರು.

ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದ ಅವರು ಎರಡನೇ ಅವಧಿಯಲ್ಲಿ ಪರೀಕ್ಷೆ ಬರೆದು ಪಾಸಾಗುತ್ತಾರೆ.16ನೇ ವಯಸ್ಸಿನಲ್ಲಿ ಪ್ರಿಂಟಿಂಗ್‌ ಪ್ರೆಸ್‌ ನೋಡಿಕೊಳ್ಳುತ್ತಿದ್ದ ವಿಜಯ್‌, 26ನೇ ವಯಸ್ಸಿನಲ್ಲಿ ಲಾರಿ ಬ್ಯುಸಿನೆಸ್‌ ಮಾಡಲು ಮುಂದಾಗುತ್ತಾರೆ.ಈ ಚಿಕ್ಕ ವಯಸ್ಸಿನ ಮಗನ ನಿರ್ಧಾರಕ್ಕೆ ಅವರ ತಂದೆಯವರೇ ವಿರೋಧಿಯಾಗುತ್ತಾರೆ. ಅನುಭವವಿಲ್ಲದೆ ಮಗ ಈ ಉದ್ಯಮ ಮಾಡಲು ಸಾಧ್ಯವಿಲ್ಲ ಎಂದು ಅವರು ಚಿಂತಿಸುತ್ತಾರೆ.ಸ್ನೇಹಿತರ ಮುಂದೆ ಇವರ ಹುಚ್ಚತನದ ಬಗ್ಗೆ ದೂರುತ್ತಾರೆ.

ಯಾರ ಸಹಾಯವು ದೊರೆಯದೆ ಏಕಾಂಗಿಯಾಗಿ ಹೋರಾಡಿದ ಅವರು, ಮಾಡದ ಕೆಲಸಗಳೇ ಇಲ್ಲ. ಲಾರಿ ಡ್ರೈವರ್‌ನಿಂದ ಹಿಡಿದು ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಲಾರಿಗೆ ಹೊಸ ಟೈರ್ ಹಾಕಿಸಲು ದುಡ್ಡು ಇರದ ವೇಳೆ ಹೆಂಡತಿಯ ಆಭರಗಳನ್ನು ಮಾರಿ ಲಾರಿಗೆ ಹೊಸ ಟೈರ್ ಹಾಕಿಸಿಕೊಳ್ಳುತ್ತಾರೆ.ಮುಂಜಾನೆ 4 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಕಷ್ಟಪಟ್ಟು ದುಡಿಯುತ್ತಾರೆ.

ಹೀಗೆ ಕಷ್ಟಗಳ ನಡುವೆ ಎದೆಗುಂದದೆ ಲಾರಿಗಳ ಸಂಖ್ಯೆಗಳನ್ನು ಹೆಚ್ಚಿಸುತ್ತ ಹೋಗುತ್ತಾರೆ. ತಮಗೆ ಎದುರಾದ ತೊಂದರೆಗಳನ್ನು ತಮ್ಮ ಸಾಧನೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ತಮ್ಮ ಗುರಿಯೆಡೆ ಶ್ರದ್ಧೆಯಿಂದ ದುಡಿಯುತ್ತಾರೆ. ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಒಂದು ಲಾರಿಯಿಂದ ಪ್ರಾರಂಭಿಸಿದ ಅವರ ಬ್ಯುಸಿನೆಸ್‌ ಇಂದು 5000 ಲಾರಿಗಳಿಗೆ ಬಂದು ನಿಂತಿದೆ. ಅವರ ವಾರ್ಷಿಕ ಆದಾಯ 17,029 ಕೋಟಿ ರೂ.ಗಳಂತೆ. ಕೇವಲ ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲಿಯೂ ಅವರ ವಿಆರ್‌ಎಲ್‌ ಸರ್ವಿಸ್‌ ಲಭ್ಯವಿದೆ.

ಒಂದು ಲಾರಿಯಿಂದ ಶುರುವಾದ ‘ವಿಜಯ ಸಂಕೇಶ್ವರ್’ ಅವರ ಪಯಣ ಇಂದು VRL ಎಂಬ ದೊಡ್ಡ ಮಟ್ಟದ ಕಂಪನಿಯಾಗಿ ಬೆಳೆದಿದೆ. ಸಾರಿಗೆ ಕ್ಷೇತ್ರದಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಸಹ ಹೆಸರು ಮಾಡಿರುವ ಇವರ ಈ ಸ್ಪೂರ್ತಿಧಾಯಕ ಯಶೋಗಾಧೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.

LEAVE A REPLY

Please enter your comment!
Please enter your name here