ಹೌದು ಒಂದೊಂದು ದೇವಾಲಯವು ಕೂಡ ತನ್ನದೆಯಾದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಆಗೇ ಈ ದೇವಾಲಯವು ಕೂಡ ನಾವು ಪ್ರೀತಿಸಿದವರನ್ನೇ ಅಥವಾ ಬಯಸಿದವರನ್ನೇ ವಿವಾಹವಾಗುವ ಭಾಗ್ಯವನ್ನು ಕರುಣಿಸುತ್ತದೆ. ಅನ್ನೋದು ಇದರ ವಿಶೇಷವಾಗಿದೆ.

ಈ ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯ. ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಈ ದೇವಾಲಯದ ವಿಶೇಷವೆನೆಂದರೆ ಇಲ್ಲಿನ ಶಿವನು ತಾವು ಬಯಸಿದ ಜೀವನ ಸಂಗಾತಿಯನ್ನು ನೀಡುವುದು. ಹೀಗೆ ಸ್ವಾಮಿಯಿಂದ ತಮ್ಮ ಬಾಳಸಂಗಾತಿಯನ್ನು ಪಡೆದ ಅದೆಷ್ಟು ಉದಾಹರಣೆಗಳು ಇಲ್ಲಿವೆಯಂತೆ . ತಾವು ಅಂದುಕೊಂಡಿರುವುದು ಆಗುತ್ತದೆ ಎಂಬ ವಿಶ್ವಾಸದಿಂದ ಈ ಒಂದು ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಬಯಸಿದವರನ್ನೇ ವಿವಾಹವಾಗ ಬೇಕಾದರೆ ಏನು ಮಾಡಬೇಕು ?

ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಜೀವನಸಂಗಾತಿಯನ್ನು ಪಡೆಯಲು ಶಿವನನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಆರಾಧಿಸಬೇಕಾಗುತ್ತದೆ. ಶಿವನಲ್ಲಿ ಸ್ಮರಿಸಿ ಪ್ರಾರ್ಥನೆ ಮಾಡಿದವರಿಗೆ ಮಾತ್ರ ತಮ್ಮ ಇಷ್ಟಾರ್ಥಗಳು ನೇರವೇರುತ್ತದೆ ಎಂಬುದು ಅಲ್ಲಿಯ ಸ್ಥಳೀಯರ ನಂಬಿಕೆಯಾಗಿದೆ.

ಈ ಒಂದು ದೇವಾಲಯದ ಹೆಸರು ಶಕ್ತಿವನೇಶ್ವರ ದೇವಾಲಯವಾಗಿದೆ. ದೇವಾಲಯವಿರುವುದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಪಟ್ಟಣದಿಂದ 7 ಕಿ. ಮೀ ದೂರದಲ್ಲಿರುವ ತಿರುಶಕ್ತಿಮಟ್ಟಂ ಎಂಬ ಹಳ್ಳಿಯಲ್ಲಿ.

ಈ ಒಂದು ದೇವಾಯದ ಬಗ್ಗೆ ಹಾಗು ಆ ದೇವರ ಮಹತ್ವ ಕುರಿತು ಒಂದು ವಿಶಿಷ್ಟ ಕಥೆ ಕೂಡ ಇದೆ .!!!

ಶಿವಪಾರ್ವತಿ ಪಾರ್ವತಿಯು ಬೆಳೆದು ದೊಡ್ಡವಳಾಗುತ್ತಾಳೆ. ಒಂದು ದಿನ ಶಿವನನ್ನು ಕಾಣುತ್ತಾಳೆ. ಆತನೇ ತನ್ನ ಪತಿಯೆಂದು ಭಾವಿಸಿ ಪ್ರತಿ ಕ್ಷಣವು ಮಹಾಶಿವನ ಬಗ್ಗೆ ಯೋಚಿಸುತ್ತಿರುತ್ತಾಳೆ. ಪಾರ್ವತಿಯು ಶಿವನ ಪ್ರೀತಿಯಲ್ಲಿಯೇ ತನ್ಮಯಳಾಗಿ ಆತನನ್ನೇ ವರಿಸಬೇಕು ಎಂದು ನಿರ್ಧರಿಸುತ್ತಾಳೆ. ತಪಸ್ಸು ಶಿವನನ್ನು ವರಿಸುವುದು ಅಷ್ಟು ಸುಲಭದ ಮಾತು ಆಗಿರಲಿಲ್ಲ. ಹಾಗಾಗಿ ತನ್ನ ಶಿವನನ್ನು ವರಿಸಲೇಬೇಕು ಎಂದು ಘೋರವದ ತಪಸ್ಸು ಆಚರಿಸುತ್ತಾಳೆ.

ಆ ಪಾರ್ವತಿ ದೇವಿ ತಪಸ್ಸು ಮಾಡಿದ ಸ್ಥಳವೇ ಈಗಿರುವ ದೇವಾಲಯವಾಗಿದೆ. ಆ ತಾಯಿ ತಪಸ್ಸಿನ ಫಲವೇ ಆ ಸ್ಥಳ ಇಂದು ಪ್ರಸಿದ್ಧಿ ಪಡೆದಿದೆ ಅನ್ನೋ ಮಾತು ಅಲ್ಲಿಯ ಸ್ಥಳೀಯರದ್ದು ಒಂದೇ ಕಾಲಿನಲ್ಲಿ ನಿಂತು ತಪಸ್ಸನ್ನು ಆಚರಿಸುತ್ತಾಳೆ. ಶಿವನನ್ನು ಪಡೆದೆ ತಿರುತ್ತೇನೆಂಬ ಇಚ್ಛೆ ಅವಳಲ್ಲಿ ಪ್ರಬಲವಾಗಿರುತ್ತದೆ. ಇದನ್ನು ಕಂಡ ಶಿವನು ಪ್ರಸನ್ನನಾಗುತ್ತಾನೆ. ಅಗ್ನಿ ರೂಪದಲ್ಲಿ ದರ್ಶನ ಪ್ರಸನ್ನನಾಗಿದ್ದರೂ ಕೂಡ ಪ್ರತ್ಯಕ್ಷನಾಗುವುದಿಲ್ಲ. ಪಾರ್ವತಿ ದೇವಿ ಮಾತ್ರ ಅಲುಗಾಡದಂತೆ ಹಾಗೆಯೇ ಇರುತ್ತಾಳೆ. ಕೊನೆಗೆ ಶಿವನು ತೇಜೋಮಯವಾದ ಅಗ್ನಿಯ ರೂಪದಲ್ಲಿ ದರ್ಶನ ನೀಡುತ್ತಾನೆ. ಶಿವನ ಆ ರೂಪವನ್ನು ಕಂಡ ಪಾರ್ವತಿ ಕೊಂಚವು ಕೂಡ ಹೆದರದೆ ಆ ಅಗ್ನಿಯನ್ನೇ ತಬ್ಬಿಕೊಂಡು ಭಾವುಕಳಾಗುತ್ತಾಳೆ. ವಿವಾಹ ಪಾರ್ವತಿಯ ಪ್ರೇಮಕ್ಕೆ ಮಣಿದ ಮಹಾಶಿವನು ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷಗೊಂಡು ಪಾರ್ವತಿ ದೇವಿಯನ್ನು ವಿವಾಹ ಮಾಡಿಕೊಳ್ಳುತ್ತಾನೆ.

ಈ ರೀತಿಯಾಗಿ ಪಾರ್ವತಿ ದೇವಿಯು ತಾನು ಇಷ್ಟಪಟ್ಟಿದ್ದ ಶಿವನನ್ನೇ ಪತಿಯಾಗಿ ಪಡೆದುಕೊಳ್ಳುತ್ತಾಳೆ. ಹಾಗಾಗಿಯೇ ಈ ದೇವಾಲಯಕ್ಕೆ ಭೇಟಿ ನೀಡಿ ಶ್ರದ್ಧೆ, ಭಕ್ತಿಯಿಂದ ಶಿವನನ್ನು ಆರಾಧಿಸಿದವರಿಗೆ ತಮ್ಮ ಇಷ್ಟ ಬಾಳಸಂಗಾತಿಯನ್ನು ನೀಡುತ್ತಾನೆ. ಅನ್ನೋದು ಅಲ್ಲಿಯ ಸ್ಥಳೀಯರ ಮಾತು. ಅದೇನೇ ಇರಲಿ ನೀವು ಪ್ರೀತಿಸಿದವರು ನಿಮಗೆ ಸಿಗಬೇಕೆಂದರೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡುವುದು ಒಳ್ಳೆಯದು.

LEAVE A REPLY

Please enter your comment!
Please enter your name here