ನಮಗೆ ರಜಾದಿನಗಳು ಬಂದರೆ ಸಾಕು ಕುಟುಂಬದವರೊಂದಿಗೆ ಹೊರಗೆ ಸುತ್ತಾಡಲು ಇಲ್ಲವೇ ಟ್ರಿಪ್ ಹೋಗಲು ಬಯಸುತ್ತೇವೆ. ಹೆಚ್ಚಿನ ಜನರು ಪುಣ್ಯ ಕ್ಷೇತ್ರಗಳಿಗೆ ಇಲ್ಲವೇ ಸಮುದ್ರ ತೀರಗಳಿಗೆ ಹೋಗಲು ಬಯಸುತ್ತಾರೆ. 15 ರಿಂದ 35 ವಯಸ್ಸಿನಲ್ಲಿರುವವರು ಹೆಚ್ಚಿನದಾಗಿ ಸಮುದ್ರತೀರಗಳನ್ನೇ ಇಷ್ಟಪಡುತ್ತಾರೆ, ಏಕೆಂದರೆ ಅವರು ನೀರಿನಲ್ಲಿ ಮೋಜು ಮಸ್ತಿ ಮಾಡಲು ಬಯಸುತ್ತಾರೆ. ಹೀಗೆ ಗೆಳೆಯರೊಂದಿಗೆ ಅಥವಾ ಕುಟುಂಬದವರೊಂದಿಗೆ ನಾವು ನೀವೆಲ್ಲರೂ ಹಲವಾರು ಸಮುದ್ರಗಳನ್ನ ನೋಡಿರುತ್ತೇವೆ ಆದರೆ ಸಮುದ್ರ ತೀರಗಳಲ್ಲಿ ಸಾಮಾನ್ಯವಾಗಿ ಬಿಳಿ ಮರಳು ಅಥವಾ ತಿಳಿ ಕಂದು ಬಣ್ಣದ ಮರಳನ್ನ ನೋಡಿರುತ್ತೇವೆ, ಆದರೆ ಇವುಗಳನ್ನ ಹೊರತುಪಡಿಸಿ ನಮ್ಮ ಭೂಮಿ ಮೇಲೆ ವಿಚಿತ್ರ ಬಣ್ಣಗಳ ಮರಳು ಇರುವ ಸಮುದ್ರಗಳಿವೆ ಅವು ಯಾವುವು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಒಂದು ವರದಿ.

* ಗುಲಾಬಿ ಬಣ್ಣದ ಮರಳಿರುವ “ಬಹಾಮಾಸ್ ಸಮುದ್ರ”

ಈ ಸಮುದ್ರದಲ್ಲಿ ಹವಳಗಳು ಹೆಚ್ಚಾಗಿವೆ, ಅಲೆಗಳ ಜೊತೆ ಸಮುದ್ರ ತೀರಕ್ಕೆ ಬರುವ ಈ ಹವಳದ ಪುಡಿ ಕಪ್ಪೆ ಚಿಪ್ಪನ್ನ ಬ್ಲೇಚ್ ಮಾಡಿ ಹೀಗೆ ಗುಲಾಬಿ ಬಣ್ಣ ಆಗುವ ಹಾಗೆ ಮಾಡುತ್ತೆ, ಇದೆ ಕಾರಣಕ್ಕೆ ಬಹಾಮಾಸ್ ಮರಳಿನಲ್ಲಿರೋ ಸಮುದ್ರದಲ್ಲಿ ಗುಲಾಬಿ ಬಣ್ಣದ ಕಪ್ಪೆ ಚಿಪ್ಪುಗಳ ರಾಶಿ ಇದೆ.

* ಕೆಂಪು ಮರಳಿನ “ರಬಿಡ ಸಮುದ್ರ”

ಈ ರಬಿಡ ಬಳಿ ಒಂದು ಜ್ವಾಲಾಮುಖಿ ಇದೆ. ಜ್ವಾಲಾ ಮುಖಿ ಯಿಂದ ಬರುವ ಲವದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಇದೆ. ಇದರ ಆಕ್ಸಿಡೇಷನ್ ಪ್ರಕ್ರಿಯೆಯಿಂದ ಇಲ್ಲಿನ ಮರಳಿನ ಬಣ್ಣ ಕೆಂಪಾಗಿದೆ.

ಹವಾಯ್ ದ್ವೀಪದ ಕಪ್ಪು ಮರಳಿನ “ಪುನಲೂ ಸಮುದ್ರ”

ಜ್ವಾಲಾ ಮುಖಿ ಸ್ಪೋಟಿಸಿ ಅದರಿಂದ ಬರುವ ಲಾವಾ ಸಮುದ್ರದ ನೀರಲ್ಲಿ ಸೇರಿದ ತಕ್ಷಣ ಅದರ ಬಣ್ಣ ಕಪ್ಪಾಗುತ್ತದೆ. ಇದೆ ಕಾರಣಕ್ಕೆ ಇಲ್ಲಿನ ಮರಳು ಕೂಡ ಕಪ್ಪಾಗಿದೆ.

ಕಲ್ಲುಗಳ ಜೋಡಣೆಯಿಂದ ಕಂಗೊಳಿಸುವ “ಐರ್ಲ್ಯಾಂಡ್ ಸಮುದ್ರ”

ಸುಮಾರು ಮಿಲಿಯನ್ ವರ್ಷಗಳ ಹಿಂದೆ ಆಗಿರುವ ಒಂದು ವಿಚಿತ್ರ ಇದು. ಲಾವಾದಿಂದ ಹೀಗೆ ಆಗಿರ ಬಹುದು ಎಂದು ಅಂದಾಜು ಮಾಡುತ್ತಾರೆ, ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೆ ಯಾರೋ ಪ್ಲಾನ್ ಮಾಡಿ ಕಲ್ಲುಗಳನ್ನ ಜೋಡಿಸಿರುವ ಹಾಗೆ ಇರುವುದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ.

* ಹಸಿರು ಬಣ್ಣದ ಮರಳು ಇರುವ ಫ್ರಾನ್ಸ್ ನ “ಗಿಯಾನ್ ಸಮುದ್ರ”

ಇಲ್ಲಿನ ಮರಳನ್ನ ಅಂಗೈಯಲ್ಲಿ ಹಾಕಿ ಕೊಂಡು ನೋಡುವುದೇ ಒಂದು ಮಜಾ. ಇಲ್ಲಿ ಸಿಗುವ ಖನಿಜಾಂಶದಿಂದ ಈ ಸಮುದ್ರದ ಮರಳು ಹಸಿರು ಬಣ್ಣ ಪಡೆದಿದೆ.

ಬಚ್ಚಿಟ್ಟುಕೊಂಡಿರುವ “ಮೆಕ್ಸಿಕೋಲಿ ಸಮುದ್ರ”

ಈ ಜಾಗ ಬಹಳ ಚನ್ನಾಗಿದೆ. ಇಲ್ಲಿಯ ನೀರು ಹೇಗೆ? ಎಲ್ಲಿಂದ ಬರುತ್ತೆ ಅನ್ನುವುದೇ ಆಶ್ಚರ್ಯ . ಭೂಮಿನ ತೂತು ಮಾಡಿ ಕೊರೆದು ಯಾರೋ ನೀರು ತುಂಬಿಟ್ಟಿರೋ ಹಾಗೆ ಇದೆ ಈ ಸಮುದ್ರ. ಈ ಜಾಗ ನೋಡಿದರೆ ಮತ್ತೆ ಮತ್ತೆ ನೋಡುವ ಅಸೆ ಖಂಡಿತ ಆಗುತ್ತೆ.

LEAVE A REPLY

Please enter your comment!
Please enter your name here