ಹೌದು ಪ್ರಪಂಚದಲ್ಲಿ ಸಾಕಷ್ಟು ಜೀವಿಗಳಿವೆ, ಅದರಲ್ಲಿ ಯಾವುವು ವಿಷ ಜಂತುಗಳು ಯಾವುದು ಒಳ್ಳೆಯ ಜಂತುಗಳು ಎಂದು ತಿಳಿಯುವದು ಕಷ್ಟ, ರ್ರಗ ನಾವು ಹೇಳುವ ಜಂತುಗಳು ಅಥವಾ ಹುಟುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ ಮುಟ್ಟಿದರೆ ನಿಮ್ಮ ಜೀವಕ್ಕೆ ಅಪಾಯ ಆಗುವುದು ಸುಳ್ಳಲ್ಲ..!

ಕೋನಾಕಾರದ ಬಸವನ ಹುಳ:

ಚಿತ್ರದಲ್ಲಿರುವ ಹಾಗೆ ಕಾಣಿಸುವ ಬಸವನ ಹುಳವನ್ನು ಯಾವುದೇ ಕಾರಣಕ್ಕೂ ಮುತ್ತ ಬೇಡಿ ಒಂದು ವೇಳೆ ಮುಟ್ಟಿದ್ದೆ ಆದಲ್ಲಿ ಒಂದು ಸಿಗರೇಟ್ ಸೇದುವ ಟೈಮ್ ಅಲ್ಲಿ ನಿಮ್ಮ ಜೀವ ಹೋಗಿಬಿಡಬಹುದು ಇದರಲ್ಲಿನ ವಿಷ ನಿಮ್ಮ ದೇಹಕ್ಕೆ ಕ್ಷಣಾರ್ಧದಲ್ಲಿ ಏರಿಬಿಡುತ್ತದೆ.

ಕಲ್ಲಿನಂತಹ ಮೀನು:

ಸಮುದ್ರದ ತೀರಗಳಿಗೆ ಪ್ರವಾಸ ಹೋದಲ್ಲಿ ಈ ರೀತಿಯಾದ ಮೀನು ಅಪರೂಪಕ್ಕೆ ಕಾಣಸಿಗುತ್ತದೆ, ಈ ಮೀನು ನಿಮ್ಮ ಜೀವಕ್ಕೆ ಕುತ್ತು ತರಬಹುದು, ಕಾರಣ ಈ ಕಲ್ಲಿನಂತಹ ಮೀನಿನಲ್ಲಿರುವ ಸಣ್ಣ ಸಣ್ಣ ಮುಕ್ಕುಗಳು ನಿಮ್ಮ ಕಾಲಿಗೆ ತಗುಲಿದರೆ ಸಾಕು ಒಂದು ನಿಮ್ಮ ಕಾಲನ್ನು ಕತ್ತರಿಸುವಂತಹ ಪರಿಸ್ಥಿತಿ ಅಥವಾ ನಿಮ್ಮ ಜೀವಕ್ಕೆ ಕುತ್ತಾಗುವಂತಹ ಪರಿಸ್ಥಿತಿ ಬರಬಹುದು ಆದಷ್ಟು ಈರೀತಿಯ ಮೀನಿನಿಂದ ದೂರವಿರಿ.

ಹೆಜ್ಜೇನು:

ಇದನ್ನು ನೀವು ನೋಡಿಯೇ ಇರುತ್ತೀರಿ, ಆದಷ್ಟು ಹೆಜ್ಜೇನಿನಿಂದ ದೂರವಿದ್ದುಬಿಡಿ ಒಂದು ವೇಳೆ ಕಂಡರೂ ಅವನ್ನು ಕೆರಳಿಸುವಂತಹ ಕೆಲಸಕ್ಕೆ ಕೈ ಹಾಕಬೇಡಿ, ಒಂದು ವೇಳೆ ಇವು ನಿಮಗೆ ಕಚ್ಚಿದ್ದೆ ಆದಲ್ಲಿ ನಿಮ್ಮ ದೇಹದ ಅಂಗಾಂಗಗಳು ಊಬಿಕೊಂಡು ನಿಮಗೆ ಮರಣವೂ ಸಂಭವಿಸಬಹುದು.

ಬ್ರೆಝಿಲಿಯನ್ ಜೇಡ :

ಹೌದು ನಾವು ನಮ್ಮ ಮನೆಗಳಲ್ಲಿ ಜೇಡವನ್ನು ನೋಡಿರುತ್ತೇವೆ, ಆದರೆ ಈ ಚಿತ್ರದಲ್ಲಿ ತೋರಿಸಿರುವ ಜೇಡ ನಿಮಗೆ ಕಂಡಲ್ಲಿ ಯಾವುದೇ ಕಾರಣಕ್ಕೂ ಹತ್ತಿರ ಹೋಗಬೇಡಿ ಏಕೆಂದರೆ ಇದರ ಜೊಲ್ಲಿನಲ್ಲಿ ಅಪಾಯಕಾರಿ ವಿಷವಿರುತ್ತದೆ ಒಂದುವೇಳೆ ಇದು ನಮ್ಮ ದೇಹಕ್ಕೆ ಸೇರಿದಲ್ಲಿ ಮರಣ ಸಂಭವಿಸಬಹುದು, ಎಲ್ಲ ಜೇಡಗಳು ಅಪಾಯಕಾರಿಯಾಗಿರುವುದಿಲ್ಲ.

ಡಾರ್ಟ್ ಕಪ್ಪೆ:

ಚಿತ್ರದಲ್ಲಿ ತೋರಿಸಿರುವಂತಹ ಕಪ್ಪೆ ನಿಮಗೇನಾದರೂ ಕಂಡರೆ ದೂರ ಓಡಿಹೋಗಿಬಿಡಿ ಕಾರಣ ಈ ಕಪ್ಪೆಯಲ್ಲಿ ಚರ್ಮದಲ್ಲೇ ವಿಷವಿರುತ್ತದೆ ಈ ಕಪ್ಪೆ ಕಚ್ಚುವುದಿರಲಿ ಕೇವಲ ಮುಟ್ಟಿದರೆ ಸಾಕು ನೀವು ಶಿವನ ಪಾದ ಸೇರುವಿರಿ.

LEAVE A REPLY

Please enter your comment!
Please enter your name here