ಇತ್ತೀಚಿನ ದಿನಗಳಲ್ಲಿ ಈ ಗ್ಯಾಸ್ ಗೀಸರ್ ಬಳಸುವುದು ತುಂಬ ಹೆಚ್ಚಾಗಿದೆ ಮತ್ತು ಇದರಿಂದ ತುಂಬ ರೀತಿಯ ಅನಾಹುತಗಳು ಸಂಭವಿಸಿ ಮತ್ತು ಇತ್ತೀಚಿನ ಒಂದು ವರದಿ ಪ್ರಕಾರ ಬೆಂಗಳೂರಿನಲ್ಲಿ ತಾಯಿ ಮಗಳು ಸ್ನಾನದ ಮನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಗ್ಯಾಸ್ ಗೀಸರ್ ಅಳವಡಿಸಿರುವ ಸ್ನಾನಗೃಹದಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದಿದ್ದರೆ ಅದು ಕಾರ್ಬನ್ ಮೋನಾಕ್ಸೈಡ್ ಆಗಿ ಬದಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸಮಸ್ಯೆಗೆ ಒಳಗಾಗುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ವಿಷಕಾರಿ ಅನಿಲವಾಗಿರುವ ಕಾರ್ಬನ್ ಮೋನಾಕ್ಸೈಡ್ ಬಣ್ಣರಹಿತ, ವಾಸನೆ ರಹಿತ ಮತ್ತು ಯಾವುದೇ ರೀತಿಯಿಂದಲೂ ಅನುಭವಕ್ಕೆ ಬರದ ಕಾರಣ ಇದನ್ನು ಪತ್ತೆ ಹಚ್ಚುವುದು ಸುಲಭವಲ್ಲ. ಆಯಾಸ, ತಲೆನೋವು, ತಲೆಸುತ್ತು, ಗಲಿಬಿಲಿ, ಫಿಟ್ಸ್, ಮರೆಗುಳಿತನ ಇದರ ಲಕ್ಷಣಗಳು. ಶಾಶ್ವತ ನರರೋಗ, ನಿಧಾನವಾಗಿ ವೆುದುಳು ಹಾಗೂ ಹೃದಯಕ್ಕೆ ನಂಜು ಏರಿ ಸಾವಿಗೂ ಇದು ಕಾರಣವಾಗಿದೆ.

ವಿಷಕಾರಿ ಕಾರ್ಬನ್ ಮೋನಾಕ್ಸೈಡ್ ನಿಯಂತ್ರಿಸುವ ಕೆಲ ವಿಧಾನಗಳು ಇಲ್ಲಿವೆ ನೋಡಿ:

1. ಗ್ಯಾಸ್ ಗೀಸರ್ ಸ್ವಿಚ್ ಆನ್ ಮಾಡಿದಾಗ ಸ್ನಾನಗೃಹದ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ.

2. ಸ್ನಾನಕ್ಕೆ ಕೆಲ ಹೊತ್ತಿನ ಮೊದಲೇ ಬಿಸಿ ನೀರನ್ನು ಸಂಗ್ರಹಿಸಿ.

3. ಗ್ಯಾಸ್ ಗೀಸರ್‌ಗೆ ಅತಿ ಕಡಿಮೆ ಎಲ್.ಪಿ.ಜಿ ಬಳಸಿ.

4. ಗ್ಯಾಸ್ ಗೀಸರ್ ಅನ್ನು ಸ್ನಾನದ ಕೋಣೆಯಿಂದ ಹೊರಗಡೆ ಅಳವಡಿಸಿ, ಬಿಸಿ ನೀರಿನ ಸಂಪರ್ಕ ಮಾತ್ರ ಕಲ್ಪಿಸಿದರೆ ಒಳಿತು.

5. ಗ್ಯಾಸ್ ಗೀಸರ್‌ನ ಚಿಮಣಿಗೆ ಗಾಳಿ ಯಂತ್ರ (ಎಕ್ಸಾಸ್ಟ್) ಅಳವಡಿಸಿ. ಇದರಿಂದ ವಿಷಕಾರಿ ಅನಿಲ ಸ್ನಾನಗೃಹದ ಹೊರಗೆ ಬಿಡುಗಡೆ ಆಗುತ್ತದೆ.

6. ಗೀಸರ್‌ಗೆ ಅಲಾರಾಂ ಅಳವಡಿಸಬಹುದು

LEAVE A REPLY

Please enter your comment!
Please enter your name here