ಹೌದು ಈ ದೇವಾಲಯದಲ್ಲಿನ ಶಿವಲಿಂಗವು ದಿನಕ್ಕೆ ಮೂರು ಬಣ್ಣಕೆ ಪರಿವರ್ತನೆ ಗೊಳ್ಳುತ್ತದೆ.! ಎಲ್ಲಿ ಗೋತ್ತಾ ರಾಜಸ್ಥಾನ ಮೂಲದ ಅಚಲೇಶ್ವರ ಮಹಾದೇವ ಮಂದಿರ ಮೌಂಟ್‌ ಅಬುವಿನಿಂದ ಸುಮಾರು 11 ಕಿಮೀಟರ್‌ ದೂರದಲ್ಲಿ ಉತ್ತರ ಭಾಗದಲ್ಲಿದೆ.

ಈ ಅಚಲೇಶ್ವರ ಮಹಾದೇವ ಮಂದಿರ ಕಾಡಿನ ನಡುವೆ ಇರುವುದರಿಂದ ಅತಿ ಕಡಿಮೆ ಜನ ಇಲ್ಲಿ ದರ್ಶನ ಪಡೆಯಲು ಬರುತ್ತಿದ್ದರು. ಆದರೆ ಕೆಲವು ದಿನಗಳ ನಂತರ ಈ ಮಂದಿರದ ಮಹಿಮೆಯ ಬಗ್ಗೆ ಜನರಿಗೆ ತಿಳಿದು ಬರಲು ಆರಂಭವಾದ ಮೇಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದ್ದಾರೆ.

ಈ ದೇವಾಲಯದ ವಿಶೇಷ ಏನು?

ರಾಜಸ್ಥಾನದ ಈ ಶಿವಾಲಯವು ನಿಗೂಢ ಮಂದಿರವೆಂದು ನಂಬಲಾಗಿದೆ. ಈ ಅಚಲೇಶ್ವರ ಮಹಾದೇವ ಮಂದಿರದ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಶಿವಲಿಂಗವು ಕೆಂಪು ಬಣ್ಣದಲ್ಲಿದ್ದರೆ, ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣಕ್ಕೆ ಬದಲಾಗುತ್ತದೆ. ರಾತ್ರಿ ವೇಳೆಯಲ್ಲಿ ಶಿವಲಿಂಗದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಪವಾಡವನ್ನು ನೋಡಲು ಪ್ರತಿ ದಿನ ಭಕ್ತರ ದಂಡು ತುಂಬಿರುತ್ತದೆ. ಭಕ್ತರು ಇದರಿಂದ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆಂದು ಭಾವಿಸುತ್ತಾರೆ.

ಮತ್ತೊಂದು ವಿಶೇಷ ಏನೆಂದರೆ? ಈ ನಿಗೂಢದ ಬಗ್ಗೆ ತಿಳಿಯಲು ನೆಲದಲ್ಲಿ ಸಾವಿರಾರು ಅಡಿ ಅಗೆದರೂ ಕೂಡ ಶಿವಲಿಂಗದ ಅಂತ್ಯ ಎಲ್ಲಾಗುತ್ತದೆಂದು ತಿಳಿದುಬಂದಿಲ್ಲ. ಆದ್ದರಿಂದ ಈ ಶಿವಲಿಂಗದ ನಿಖರ ಉದ್ದವು ಯಾರಿಗೂ ಗೊತ್ತಾಗಿಲ್ಲ. ಅವಿವಾಹಿತ ಯುವಕರು ಮತ್ತು ಯುವತಿಯರು ತಮಗೆ ಸರಿಯಾದ ಜೋಡಿ ಸಿಗದಿದ್ದಾಗ ದೇವರ ಆಶೀರ್ವಾದ ಕೋರಿ ಮಂದಿರಕ್ಕೆ ಭೇಟಿ ನೀಡುತ್ತಾರೆ.

LEAVE A REPLY

Please enter your comment!
Please enter your name here