ಕಮಾನು ರೀತಿಯ ಕಣ್ಣುಬ್ಬು:

ಇದು ಸಾಮಾನ್ಯ ರೀತಿಯಲ್ಲಿ ಕಾಣಬಹುದಾದ ಕಣ್ಣಿನ ಹುಬ್ಬು. ಈ ರೀತಿಯಾದ ಹುಬ್ಬು ಇರುವವರು ನೀವು ಯಾವಾಗಲೂ ನೇರಾ ನುಡಿಯವರಾಗಿರುತ್ತೀರಿ, ನೀವು ಜಾಸ್ತಿ ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ನೀವು ನಿಮ್ಮ ಸಮಸ್ಯೆಗಳನ್ನು ಕ್ಲಿಷ್ಟವಾಗಿ ಪರಿಗಣಿಸುವುದಿಲ್ಲ ಇದು ನಿಮ್ಮ ಸುಲಭ ಜೀವನಕ್ಕೆ ಕಾರಣವಾಗುತ್ತದೆ.

ನೇರ ರೀತಿಯ ಕಣ್ಣುಬ್ಬು:

ಇದು ಕೂಡ ಸಾಮಾನ್ಯವಾಗಿ ಕಂಡುಬರುವ ಕಣ್ಣುಬ್ಬು, ಈ ರೀತಿಯಾಗಿರುವವರು ಪ್ರಾಮಾಣಿಕವಾಗಿರುತ್ತಾರೆ, ಅವರ ಕೆಲಸ ಮತ್ತು ಅವ್ರ ಪಾಡಿಗೆ ಇರುವವರಾಗಿರುತ್ತಾರೆ. ನೀವು ನೋಡಲು ಸಾಮಾನ್ಯರಂತೆ ಕಂಡರೂ ನಿಮ್ಮಲ್ಲಿ ಅಸಾಧಾರಣ ಶಕ್ತಿ ಅಡಕವಾಗಿರುತ್ತದೆ ಅದನ್ನು ಬೇರೆಯವರಿಗೆ ತೋರಿಸಲು ನಿಮ್ಮಳ್ಳಿ ಆಸಕ್ತಿಯ ಕೊರತೆಯಿರುತ್ತದೆ. ನೀವು ಬೇರೆಯವರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳುವವರಾಗಿರುತ್ತೀರಿ.

ದೊಡ್ಡ ಕಮಾನಿನ ರೀತಿ:

ಈ ರೀತಿಯಾದ ಹುಬ್ಬಿನವರ ಮುಖ ದುಂಡಾಗಿರುವುದು ಸಾಮಾನ್ಯ, ಈ ರೀತಿಯಾದ ಹುಬ್ಬಿನವರಲ್ಲಿ ಒಳ್ಳೆಯ ಸೌಂದರ್ಯ ಅಡಕವಾಗಿರುತ್ತದೆ, ಈ ರೀತಿಯ ಹುಬ್ಬಿನವರು ತಮ್ಮ ಭಂಗಿಗಳಿಂದ ಬೇರೆಯವರನ್ನು ಮರಳುಮಾಡುವವರಾಗಿರುತ್ತಾರೆ, ನೀವು ಎಲ್ಲರಲ್ಲಿಯೂ ಬೆರೆಯಲು ಇಷ್ಟ ಪಡುತ್ತೀರಿ ಇದೆ ಗುಣ ನಿಮ್ಮನ್ನು ಜನರು ಇಷ್ಟ ಪಡುವಂತೆ ಮಾಡುತ್ತಿರುತ್ತದೆ.

ಮೇಲ್ಮುಖವಾಗಿ ನೀವಾದ ಕಣ್ಣುಬ್ಬು:

ಈ ರೀತಿಯಾದ ಹುಬ್ಬು ಇರುವವರು ನೋಡಲು ಸಿಡುಕರಂತೆ ಕಂಡರೂ ಒಳ್ಳೆಯ ಸ್ವಭಾವದವರಾಗಿರುತ್ತಾರೆ, ನಿಮಗೆ ವಿರೋಧಿಗಳು ಬಹಳ ಇದರಿಂದ ನಿಮ್ಮ ಕಾರ್ಯಗಳಿಗೆ ಪದೇ ಪದೇ ಅಡೆಚಣೆ ಉಂಟಾಗುತ್ತಿರುತ್ತದೆ.

ಸಣ್ಣದಾದ ಕಣ್ಣುಬ್ಬು:

ಈ ರೀತಿಯಾದ ಕಣ್ಣಿನ ಹುಬ್ಬು ಇರುವವರು ಸ್ವಲ್ಪ ಜಾಸ್ತಿ ಕೆಲಸಗಳಲ್ಲಿ ಪಕ್ವತೆಯನ್ನು ಕೇಳುವವರಾಗಿರುತ್ತಾರೆ, ನೀವುಗಳು ನಿಮ್ಮ ಕಠೋರ ನೀತಿಯಿಂದ ಎಲ್ಲರಲ್ಲೂ ಕೆಟ್ಟ ಹೆಸರನ್ನು ಗಳಿಸಿರುತ್ತೀರಿ, ಆದರೆ ನೀವು ಒಳ್ಳೆಯ ಮನಸ್ಸಿನವರಾಗಿರುತ್ತೀರಿ. ನೀವು ಒಂದು  ರೀತಿ “ನಿಷ್ಟೂರವಾದಿ ಲೋಕ ವಿರೋಧಿ” ಎನ್ನುವ ರೀತಿ..

LEAVE A REPLY

Please enter your comment!
Please enter your name here