ನಮ್ಮ ಜನರು ಅಳುವವರನ್ನ ದುರ್ಬಲರು ಕೈಲಾಗದವರು ಎಂದು ತಿಳಿಯುತ್ತಾರೆ ಅದು ತಪ್ಪು ಎಂಬುದು ಕೆಲವರಿಗೆ ಮಾತ್ರ ಗೊತ್ತು. ಇನ್ನು ಕೆಲವರು ಆಳುವವರಿಗೆ ಯಾವಾಗಲು ಬೈಯುತ್ತಾರೆ, ಸಣ್ಣ ಸಣ್ಣ ವಿಚಾರಕ್ಕೆ ಆಳುವವರಿಗೆ ಕಣ್ಣಿನ ತುದಿಯಲ್ಲೇ ಇರತ್ತೆ ನೀರು, ನಿನ್ನ ಕಣ್ಣಲ್ಲಿ ಕಾವೇರಿನೇ ಇದಾಳೆ. ಅಳುಮುಂಜಿ ನೀನು, ಹುಡುಗರು ಅತ್ತರೆ ನೀನೇನು ಹೆಂಗುಸ್ರುತರ ಅಳ್ತಿಯಲ ಅಂತ ಹೇಳುತ್ತಾರೆ ಹೀಗೆ ವಿವಿಧ ಬಗೆಯ ನಾಮಕರಣ ಮಾಡಿ ಆಳುವವರಿಗೆ ಮುಜುಗರವಾಗುವಂತೆ ಮಾಡುತ್ತಾರೆ. ಆದರೆ ಹೆಚ್ಚು ಆಳುವವರು ಇನ್ನು ಮುಂದೆ ಮುಜುಗರ ಪಡುವ ಅವಶ್ಯಕತೆ ಇಲ್ಲ.

ಹೌದು ವಾಸ್ತವಾಗಿ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣಲ್ಲಿ ನೀರು ಹಾಕುವವರು ದುರ್ಬಲರಲ್ಲ. ಸಂಶೋಧಕರ ಪ್ರಕಾರ, ಸ್ವಭಾವದಲ್ಲಿ ಅವರು ತುಂಬಾ ಒಳ್ಳೆಯವರಾಗಿರುತ್ತಾರಂತೆ. ಉತ್ತಮ ಗುಣ ಹೊಂದಿರುತ್ತಾರಂತೆ. ನೀವು ಅಳುವವರಲ್ಲಿ ಒಬ್ಬರಾಗಿದ್ದರೆ ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸಬೇಡಿ. ಬೇರೆಯವರು ಏನಂದುಕೊಳ್ತಾರೋ ಅಂತಾ ಚಿಂತೆ ಮಾಡಬೇಡಿ. ಅಳೋದು ಒಂದು ಒಳ್ಳೆ ಗುಣ ಎಂಬುದು ನಿಮಗೆ ಇನ್ನು ಮುಂದೆ ನೆನನಪಿರಲಿ. ಬೇಸರ ಹಾಗೂ ಒತ್ತಡ ಹೋಗಲಾಡಿಸಲು ಅಳುವುದು ಒಂದುರೀತಿಯ ಉತ್ತಮ ಔಷಧಿ ಎಂದರೆ ನೀವು ನಂಬಲೇ ಬೇಕು.

ಬೇಸರವಾಗಿದ್ದರೆ ಅದು ಮನಸ್ಸಿನಲ್ಲಿ ನೆಗೆಟಿವಿಟಿ ಹೆಚ್ಚಾಗಿ ಅನೇಕ ಸಮಸ್ಯೆಗಳನ್ನ ಶುರುಮಾಡುತ್ತದೆ.ಹೆಚ್ಚಿನ ಒತ್ತಡ ಹಾಗೂ ನೋವು ನಿಮ್ ಮನಸಿನಲ್ಲಿದ್ದರೆ ಯಾವುದೇ ಮುಜುಗರವಿಲ್ಲದೆ ನಿಮಗೆ ಸಾಧ್ಯವಾದಷ್ಟು ಬಿಕ್ಕಿ ಬಿಕ್ಕಿ ಅತ್ತು ಬಿಡಿ, ಇದರಿಂದ ನಿಮ್ಮ ಮನಸ್ಸಿನಲ್ಲಿರುವ ನೋವ್ವಿನ ಭಾರ ಆದಷ್ಟು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here