ನಮ್ಮ ಪೂರ್ವಿಕರು ಮಾಡಿದ ಆಚರಣೆಗಳೆಲ್ಲ ಒಂದೊಂದು ವಿಶೇಷತೆಗಳನ್ನ ಹೊಂದಿವೆ ಎಂದರೆ ಹಲವಾರು ನಂಬುವುದಿಲ್ಲ, ಅದೆಲ್ಲ ಮೂಡ ನಂಬಿಕೆ ಎನ್ನುತ್ತಾರೆ ಆದರೆ ನಮ್ಮ ಪೂರ್ವಿಕರು ಮಾಡಿರುವ ಸೊ ಕಾಲ್ಡ್ ಮೂಡನಂಬಿಕೆಗಳಲ್ಲಿ ಹರಿಯುವ ಹಾಗೂ ನಿಂತ ನೀರಿಗೆ ನಾಣ್ಯಗಳನ್ನ ಹಾಕುವುದು ಸಹ ಒಂದು. ನದಿಗಳಿಗೆ ನಾಣ್ಯಗಳನ್ನ ಹಾಕಿದರೆ ನಮ್ಮ ಕೋರಿಕೆಗಳೆಲ್ಲ ಈಡೇರುತ್ತವೆ ಎಂಬುದು ನಂಬಿಕೆಯಾಗಿತ್ತು ಆದರೆ ಇದು ಕೇವಲ ಆಚರಣೆಯಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ.

ಮೊದಲೆಲ್ಲ ತಾಮ್ರದ ನಾಣ್ಯಗಳು ಬಳಕೆಯಲ್ಲಿದ್ದವು. ತಾಮ್ರ ಎಂಬುದು ನಮ್ಮ ಶರೀರಕ್ಕೆ ಬಹಳ ಅವಶ್ಯಕವಾದ ಅಂಶ. ಇದರಿಂದ ಶರೀರದ ಚಯಾಪಚಯ ಪ್ರಕ್ರಿಯೆಯು ಸಕ್ರಮವಾಗಿ ನಡೆಯುತ್ತದೆ. ಶರೀರಕ್ಕೆ ಬಲವನ್ನು ನೀಡುತ್ತದೆ. ಎಷ್ಟೋ ಜೀವಕ್ರಿಯೆಗಳು ಸರಿಯಾಗಿ ನಡೆಯುತ್ತವೆ. ಅದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಹಿಂದಿನ ಕಾಲದ ಜನರು ನೀರನ್ನು ಹೆಚ್ಚಾಗಿ ನದಿಗಳು, ಕೆರೆ, ಕಲ್ಯಾಣಿಗಳಿಂದ ತಂದು ಕುಡಿಯುತ್ತಿದ್ದರು. ಆದರೆ ಅವು ಕುಡಿಯಲು ಯೋಗ್ಯವಾಗಿಲ್ಲದ ಕಾರಣ, ಅದರಲ್ಲಿ ತಾಮ್ರದ ನಾಣ್ಯಗಳನ್ನು ಎಸೆಯುತ್ತಿದ್ದರು. ಹೀಗೆ ಮಾಡುತ್ತಿರುವುದರಿಂದ ಆ ನಾಣ್ಯಗಳಿಂದ ನೀರು ಶುದ್ದಿ ಆಗುತ್ತಿತ್ತು. ಒಳಗಿರುವ ಕಲ್ಮಶಗಳೆಲ್ಲವು ಶುದ್ದವಾಗಿ, ಶುದ್ದನೀರು ಮೇಲೆ ಬರುತ್ತಿತ್ತು.

ನೀರಿನಲ್ಲಿ ನಮ್ಮ ಶರೀರಕ್ಕೆ ಅನುಕೂಲವಾಗುವಂತಹ ತಾಮ್ರದ ಲೋಹದ ಅಣುಗಳು ಸೇರಿಕೊಂಡಿರುತ್ತಿತ್ತು. ಅವು ನಮ್ಮ ಶರೀರಕ್ಕೆ ಎಷ್ಟೊ ಅವಶ್ಯಕವಾಗಿರುತ್ತಿತ್ತು. ಆದ್ದರಿಂದ ನಾಣ್ಯಗಳನ್ನು ನದಿಗಳಿಗೆ, ಕೆರೆಗಳಿಗೆ ಎಸೆಯುತ್ತಿದ್ದರು. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ತಾಮ್ರದ ಪಾತ್ರೆಗಳಲ್ಲಿ ರಾತ್ರಿ ಪೂರ್ತಿ ನೀರನ್ನು ಸಂಗ್ರಹಿಸಿ ಬೆಳಿಗ್ಗೆ ಎದ್ದ ತಕ್ಷಣ ಕುಡಿಯುತ್ತಿದ್ದರು. ಇದರಿಂದ ಅವರ ಅರೋಗ್ಯ ಚೆನ್ನಾಗಿರುತ್ತದೆಂದು ಅವರು ನಂಬಿದ್ದರು.

ಅದೇ ನಂಬಿಕೆಯಿಂದಲೆ ಕೆರೆಗಳಲ್ಲಿ, ನದಿಗಳಲ್ಲಿ ತಾಮ್ರದ ನಾಣ್ಯಗಳನ್ನು ಹಾಕುವುದಕ್ಕೆ ಆರಂಭಿಸಿದರು. ಆದರೆ ಇಂದು ನಾವು ನೀವೆಲ್ಲರೂ ಬಳಸುವ ವಾಟರ್ ಫಿಲ್ಟರ್’ಗಳಲ್ಲಿ ನೀರನ್ನ ಕುಡಿಯುತ್ತಿದ್ದೇವೆ ಇದು ಯಸ್ತರ ಮಟ್ಟಿಗೆ ಸರಿ ಎಂಬುದು ಅವರವರ ಅನುಕೂಲಕ್ಕೆ ಬಿಟ್ಟದ್ದು.

LEAVE A REPLY

Please enter your comment!
Please enter your name here