ನೀವು ಸೇವಿಸುವ ಆಹಾರ

ನಿಮ್ಮ ಆಹಾರ ಸಹ ನಿಮ್ಮ ಭಾವನೆಗಳೊಂದಿಗೆ ನೇರವಾದ ಸಂಬಂಧವನ್ನು ಹೊಂದಿರುತ್ತದೆ. ಆದ್ದರಿಂದ ಖಾರ ಹಾಗು ಎಣ್ಣೆಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಹೆಚ್ಚಿಗೆ ಸೇವಿಸಬೇಡಿ. ಇವುಗಳು ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ.

ಚಟುವಟಿಕೆಯಿಂದ ಇರಿ ಮತ್ತು ವ್ಯಾಯಾಮ ಮಾಡಿ

ಕೋಪವು ನಿಮ್ಮ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಹೊತ್ತು ವ್ಯಾಯಾಮಕ್ಕೆ ಎಂದು ಮೀಸಲಿಡಿ. ಯಾವಾಗ ನಿಮಗೆ ಕೋಪ ಹೆಚ್ಚಾಗುತ್ತಿದೆ ಎಂದು ಎನಿಸುತ್ತದೆಯೋ, ಆಗ ಒಂದು ವೇಗದ ನಡಿಗೆ ಮಾಡಿ. ಯೋಗಾಸನ ಮತ್ತು ಧ್ಯಾನಗಳು ಸಹ ನಿಮ್ಮ ಕೋಪವನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತವೆ. ದೇಹದಲ್ಲಿರುವ ಬಿಗಿತನವನ್ನು ಕಡಿಮೆ ಮಾಡುತ್ತವೆ. ಜೊತೆಗೆ ನಿಮ್ಮ ಮೂಡ್ ಅನ್ನು ಸರಿಯಾಗಿ ಇರಿಸುವ ಎಂಡೋರ್ಫಿನ್ಗಳನ್ನು ಹೆಚ್ಚು ಹೆಚ್ಚು ಬಿಡುಗಡೆ ಮಾಡುತ್ತವೆ.

ಅನಿವಾರ್ಯ ಕಾರಣಗಳಿಂದ ಪ್ರತಿಯೊಬ್ಬರಿಗೂ ಸಿಟ್ಟು ನೆತ್ತಿಗೇರುತ್ತದೆ. ಆಗ ಕುಟುಂಬದ ಮೇಲೋ, ಪ್ರೀತಿ ಪಾತ್ರರ ಮೇಲೋ ಹರಿಹಾಯುತ್ತೇವೆ. ಕೋಪ ನಿಯಂತ್ರಿಸಿಕೊಳ್ಳಲು ಕಲಿಯಬೇಕು ನಿಜ.

ಸಂಬಂಧ ಕಡಿತ ಹಾಗೂ ಭಾಷಾ ಪ್ರಯೋಗ

ಸಿಟ್ಟು ಬಂದಾಕ್ಷಣ ಸಂಬಂಧ ಕಡಿದುಕೊಳ್ಳುವ ಮಾತನ್ನು ಆಡಬೇಡಿ. ಆ ಕ್ಷಣಕ್ಕೆ ಹೀಗೆ ಹೇಳುವುದರಿಂದ ನಾನೇ ಗೆದ್ದೆ ಎಂದು ಅನಿಸಬಹುದು. ಆದರೆ, ಅದರಿಂದ ದೀರ್ಘಕಾಲ ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು.
ನೀವೆಷ್ಟೇ ಕೋಪಿಷ್ಠರಾಗಿ ದ್ದರೂ, ಅದು ಗೊತ್ತಿರುವವರು ಹೊಂದಿಕೊಂಡು ಹೋಗುತ್ತಾರೆ. ಆದರೆ, ಸಿಟ್ಟು ಬಂದಾಗ ಯಾವುದೇ ಕಾರಣಕ್ಕೂ ಅವಾಚ್ಯ ಪದ ಬಳಸಬೇಡಿ. ಬಳಸಿದರೆ ಅದು ಪರಿಸ್ಥಿತಿಯನ್ನು ವಿಕೋಪಕ್ಕೆ ತಳ್ಳಬಹುದು.

ನಕಾರಾತ್ಮಕ ಚಿಂತನೆ
ಒಂದು ಬಾರಿ ಸಂಬಂಧ ಕಡಿದರೆ ಮತ್ತೆ ಸಿಗುವುದಿಲ್ಲ. ಹಾಗಾಗಿ, ಕೋಪ ಬಂದಾಗ ನೆಗೆಟಿವ್‌ ಆಗಿ ಯೋಚನೆ ಮಾಡಬೇಡಿ. ಆ ವ್ಯಕ್ತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು, ಕೋಪ ತಣಿಸಲು ಯತ್ನಿಸಿ.
ಕೋಪದ ಭರದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯ ನಡತೆಯ ಬಗ್ಗೆ ಕೆಟ್ಟಮಾತುಗಳನ್ನಾಡುವುದನ್ನು ಮಾಡಲೇಬೇಡಿ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ನೆನಪಿಟ್ಟುಕೊಳ್ಳಿ.

ಉಸಿರಾಟದ ಸಹಾಯವನ್ನು ಪಡೆಯಿರಿ

ಆಳವಾದ ಉಸಿರಾಟವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯಾವಾಗ ನಿಮ್ಮ ಕೋಪವು ನಿಮ್ಮ ನಿಯಂತ್ರಣವನ್ನು ಮೀರುತ್ತಿದೆ ಎನಿಸುತ್ತದೆಯೋ, ಆಗ ಆಳವಾದ ಉಸಿರಾಟವನ್ನು ಮಾಡಿ. ಇದರಿಂದ ಒತ್ತಡ ಕಡಿಮೆಯಾಗಿ, ನಿಮ್ಮ ಸ್ನಾಯುಗಳು ವಿಶ್ರಾಂತಿಯನ್ನು ಪಡೆಯುತ್ತವೆ ಹಾಗು ನಿಮ್ಮ ಕೋಪ ಶಮನಗೊಳ್ಳುತ್ತದೆ.

ಕನಿಷ್ಠ 6-8 ಗಂಟೆಗಳ ಕಾಲ ನಿದ್ದೆ ಮಾಡಿ

ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗಲಿಲ್ಲವಾದರೆ ಮನಸ್ಸಿಗೆ ಕಿರಿಕಿರಿಯಾಗುವುದು ಸಹಜ. ಸರಿಯಾಗಿ ನಿದ್ದೆ ಮಾಡದೆ ಇದ್ದಾಗ ಆಯಾಸವಾಗಿ ನಿಮಗೆ ಹೆಚ್ಚು ಕೋಪ ಬರುತ್ತಾ ಇರುತ್ತದೆ.

ಡ್ರಗ್ಸ್ ಮತ್ತು ಆಲ್ಕೋಹಾಲ್ ಸೇವನೆ ಮಾಡಬೇಡಿ

ಒಂದು ವೇಳೆ ನೀವು ಮಾದಕ ವಸ್ತುಗಳ ಸೇವನೆಗೆ ದಾಸರಾಗಿದ್ದಲ್ಲಿ, ಅದನ್ನು ಬಿಡುವ ಸಮಯ ಬಂದಿದೆ ಎಂದು ಮೊದಲು ತಿಳಿಯಿರಿ. ಡ್ರಗ್ಸ್ ತೆಗೆದುಕೊಳ್ಳುವುದು ಮತ್ತು ಆಲ್ಕೋಹಾಲ್ ಸೇವನೆಯನ್ನು ಮಾಡುತ್ತಿದ್ದರೆ ಕೋಪ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ.

Man shouting and fuming — Image by © JPM/Corbis

ಧ್ಯಾನ ಸಹಾಯ ಮಾಡುತ್ತದೆ

ಪ್ರತಿದಿನ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗು ನೀವು ಕೋಪಿಸಿಕೊಂಡಿರುವ ವ್ಯಕ್ತಿಗಳನ್ನು ಕ್ಷಮಿಸಲು ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಧ್ಯಾನವು ನಿಮ್ಮ ಭಾವನೆಗಳು ಮತ್ತು ದೇಹದಲ್ಲಿ ಉಂಟಾಗುವ ಸಂವೇದನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಹಾಗು ಆ ಮೂಲಕ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ನೆರವಾಗುತ್ತದೆ.

ಕೆಲವೊಮ್ಮೆ ನಿಮ್ಮ ಭಾವನೆಗಳನ್ನು ಬರೆದಿಡುವುದು ಸಹ ನಿಮಗೆ ನೆರವಿಗೆ ಬರುತ್ತದೆ. ಯಾವಾಗ ನಿಮ್ಮ ಮನಸ್ಸು ನಿಮ್ಮ ಕೈತಪ್ಪಿ ಹೋಗುತ್ತದೆ, ಯಾವಾಗ ನೀವು ಜನರ ಮೇಲೆ ಕೋಪಿಸಿಕೊಳ್ಳುತ್ತೀರಿ ಎಂಬುದನ್ನು ಸಹ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ವಿಶ್ರಾಂತಿ ಇಲ್ಲದ ಮತ್ತು ಊಹಿಸಲಾಗದ ಮನಸ್ಸಿನ ಸ್ಥಿತಿಯನ್ನು ಹತೋಟಿಗೆ ತರಲು ಈ ಬರವಣಿಗೆಯ ಸಾರಾಂಶಗಳು ನಿಮಗೆ ಮಾರ್ಗದರ್ಶನವನ್ನು ಮಾಡುತ್ತವೆ.

LEAVE A REPLY

Please enter your comment!
Please enter your name here