ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಹಲವು ಚರ್ಚೆಗೆ ಕಾರಣವಾಗಿತ್ತು, ದೇಶಾದ್ಯಂತ ಈ ಕುರಿತಾದ ಪರ ಮತ್ತು ವಿರೋಧದ ಚರ್ಚೆ ಗರಿಗೆದರಿತ್ತು.

ಇದರಿಂದ ಟ್ರಾಫಿಕ್ ಪೊಲೀಸ್ ನವರಿಗೆ ಬಿಡುವಿಲ್ಲದ ಕೆಲಸ ಶುರುವಾದಂತೆ ಆಗಿತ್ತು, ಆದರೆ ಈ ಕುರಿತಾಗಿ ಈಗ ಒಂದು ಬ್ರೇಕಿಂಗ್ ನ್ಯೂಸ್ ಬಂದಿದ್ದು ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಎಲ್ಲರೂ ನಿಮ್ಮನ್ನು ದಾರಿಯಲ್ಲಿ ತಡೆದು ದಂಡ ಹಾಕುದಂತೆ ಸರ್ಕಾರ ಮಾನದಂಡವನ್ನು ಪ್ರಕಟಿಸಿದೆ.

ಕೇವಲ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ (ASI * ) ಸಬ್ ಇನ್ಸ್ಪೆಕ್ಟರ್ (SI **) ಹಾಗೂ
ಇನ್ಸ್ ಪೆಕ್ಟರ್ (CPI ***) ರವರಿಗೆ ಮಾತ್ರ ರಸ್ತೆಯಲ್ಲಿ ದಾಖಲಾತಿಗಳನ್ನು ಕೇಳುವ ಹಾಗೂ ದಂಡ ಹಾಕುವ ಅಧಿಕಾರವನ್ನು ಸರ್ಕಾರ ನೀಡಿದೆ.

ಒಂದು ವೇಳೆ ಟ್ರಾಫಿಕ್ ಪೊಲೀಸ್ ಪೇದೆಗಳು, ಹೆಡ್ ಕಾನ್ಸ್ಟೇಬಲ್ ರವರು ನಿಮ್ಮನ್ನು ದಾಖಲೆಗಳನ್ನು ತೋರಿಸಿ ಮತ್ತು ದಂಡದ ಮೊತ್ತವನ್ನು ಪಾವತಿಸಲು ಸೂಚಿಸಿದರೆ ಅಂತವರ ವಿರುದ್ಧ ನೀವು ನೇರವಾಗಿ ಅಸಿಸ್ಟೆಂಟ್ ಕಮಿಷನರ್ ಅಥವಾ ಡಿಸಿಪಿ ರವರಿಗೆ ದೂರು ದಾಖಲಿಸುವ ಅವಕಾಶವನ್ನು ನೀಡಿದೆ..

LEAVE A REPLY

Please enter your comment!
Please enter your name here