ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಸೀರಿಯಲ್ ಮೊದಲು ಪುಟ್ಟ ಗೌರಿ ಮದುವೆ ಎಂಬ ಹೆಸರಿನಲ್ಲಿ ಬರುತಿತ್ತು. ಆದರೆ ಪುಟ್ಟ ಗೌರಿ ಮದುವೆ ಸೀರಿಯಲ್ ಅಲ್ಲಿ ಎಲ್ಲವೂ ಸುಕಾಂತ್ಯವಾಯಿತು ಹಲವಾರು ಕಷ್ಟಗಳನ್ನು ಮೆಟ್ಟಿ ನಿಂತು ಪುಟ್ಟ ಗೌರಿ ತನ್ನ ಜೀವನವನ್ನು ಸರಿ ಮಾಡಿಕೊಂಡು ಮಹೇಶನ ಜತೆ ಸಂತೋಷವಾಗಿ ಇರುತ್ತಾಳೆ. ಹೀಗೆ ಇರುವಾಗಲೇ ಮಧ್ಯೆ ಎಂಟ್ರಿ ಕೊಟ್ಟಿದ್ದು ಮಂಗಳ ಅನ್ನೋ ಪಾತ್ರ ಈ ಪಾತ್ರ ಪುಟ್ಟ ಗೌರಿದೇ ಅನುಕರಣೆ ಮಾಡಲಾಗಿದೆ ಎಂಬುದು ಜನಾಭಿಪ್ರಾಯ ಹಾ! ಯಾಕೆ ನಾವು ಇಸ್ಟೆಲ್ ಹೇಳತ್ತಾ ಇದೀವಿ ಅಂತ ತಿಳ್ಕೋ ಬೇಕಾ ಹಾಗಿದ್ರೆ ಇಲ್ಲಿ ಓದಿ….

ಇತೀಚಿನ ಹಲವು ಎಪಿಸೋಡಗಳಲ್ಲಿ ಬರುತ್ತಿರುವ ಮಂಗಳ ಗೌರಿ ಪಾತ್ರ ನೋಡುಗರಿಗೆ ಅಷ್ಟೊಂದು ಖುಷಿ ಕೊಡುತ್ತಿಲ್ಲ ಎಂಬುದು ಹಲವೆಡೆ ಕೇಳಿ ಬರುತ್ತಿರುವ ಸುದ್ದಿ. ಹೌದು ಮಾಡದೇ ಇರುವ ಅನೇಕ ತಪ್ಪುಗಳನ್ನು ಮಂಗಳ ತಾನೇ ಮಾಡಿದ್ದೀನಿ ಎಂದು ಹೇಳುವುದು ಸರಿ ಇಲ್ಲ ಮತ್ತು ರಾಜೀವ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದರು ಸರಿಯಾವುದು ತಪ್ಪುಯವುದು ಎಂದು ತಿಳಿದುಕೊಳ್ಳುವ ಸಾಮಾನ್ಯ ಜ್ಞಾನ ಸಹ ಇಲ್ಲ ಎಂದು ಜನ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಮತ್ತು ಮಂಗಳ ಸ್ವಭಾವನ್ನು ಅರಿತಿರುವ ರಾಜೀವ್ ಮಕ್ಕಳನ್ನು ಮಂಗಳ ಹೊರಗೆ ಹಾಕಿದ್ದಾಳೆ ಎಂಬುದನ್ನು ಕೇಳಿ ಅದೇ ಸರಿ ಎಂದು ಒಪ್ಪಿಕೊಳ್ಳುತ್ತಾನೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಆಳವಾಗಿ ವಿಚಾರಿಸುವ ಶಕ್ತಿ ಸಹ ಇಲ್ಲ ಮತ್ತು ಕಾನೂನಿನ ಅರಿವಿರುವ ರಾಜೀವ್ ಸಹ ಮೊದಲನೇ ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆ ಆಗುವುದು ಎಷ್ಟು ಸರಿ? ಅನ್ನುವುದು ಜನರ ಅಭಿಪ್ರಾಯ ಮತ್ತು ಇದು ಸಮಾಜಕ್ಕೆ ತಪ್ಪು ತಿಳುವಳಿಕೆ ನೀಡುತ್ತದೆ ಎಂಬುದು ಆಗಿದೆ.

ಜನಾಭಿಪ್ರಯ 

ರಂಜಿತ, ರಾಣೇಬೆನ್ನೂರ

ಮಂಗಳನ ಜೀವನದಲ್ಲಿ ಇಷ್ಟೆಲ್ಲ ಆದರೂ ಸೋದರ ಮಾವ ಅನಿಸಿಕೊಂಡಿರುವ ಮಹೇಶ್ ಎಲ್ಲಿ ಮತ್ತು ರಾಯದುರ್ಗದ ರಾಜೇಶ್ವರಿ ಅನ್ನೋ ದೊಡ್ಡ ಕುಟುಂಬದ ಮೊಮ್ಮಗಳಾದ ಮಂಗಳ ಗೌರಿಗೆ ಯಾಕೆ ಯಾರು ಸಹಾಯಕ್ಕೆ ಬರುತ್ತಿಲ್ಲ, ಇಷ್ಟೊಂದು ಘಟನೆಗಳು ನಡೆದರು ಪುಟ್ಟ ಗೌರಿ ಯಾಕೆ ಸುಮ್ಮನಿದ್ದಾಳೆ ತನ್ನ ಜೀವನ ಸರಿ ಹೋದಂತೆ ಯಾಕೆ ಮಂಗಳನ ಜೀವನ ಕೂಡ ಸರಿ ಇರಬೇಕು ಎಂದು ಸಹಾಯ ಮಾಡುತ್ತಿಲ್ಲ ಇವೆಲ್ಲ ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿವೆ.

ವರ್ಷ, ಬೆಂಗಳೂರು

ಈ ಧಾರಾವಾಹಿಯಲ್ಲಿ ಸೂಕ್ಷ್ಮಗಳನ್ನು ಯಾರು ಸಹ ಅರ್ಥ ಮಾಡಿಕೊಳ್ಳುವುದಿಲ್ಲ. ಮತ್ತು ಪಕ್ಕದಲ್ಲಿಯೇ ನಿಂತು ಸೌಂದರ್ಯ ಕುಹಕ ನಗು ನಗುತ್ತಿದ್ದರು ಯಾರಿಗೂ ಸಹ ಅದು ಕಾಣುವುದಿಲ್ಲ ಮತ್ತು ಇಲ್ಲಿಯವರೆಗೂ ಮಕ್ಕಳನ್ನು ಹೊರ ಹಾಕಿದ್ದು ಸೌಂದರ್ಯ ಎಂಬ ಸತ್ಯ ಗೊತ್ತಿದ್ದರೂ ಯಾರು ಸಹ ಯಾಕೆ ರಾಜೀವನಿಗೆ ಹೇಳುತ್ತಿಲ್ಲ. ಮತ್ತು ಮಕ್ಕಳನ್ನು ಮಂಗಳ ಗೌರಿಯೇ ಭಿಕ್ಷೆಗೆ ಕಳುಹಿಸಿದ್ದು ಎಂಬುದಾದರೆ ಕಳ್ಳರು ಕೈಗೆ ಸಿಕ್ಕಾಗ ಯಾಕೆ ಸರಿಯಾಗಿ ಬಾಯಿ ಬಿಡಿಸಲಿಲ್ಲ ಅವರು ಮಂಗಳ ಎಂದ ತಕ್ಷಣ ನೀವು ಹೇಗೆ ನಂಬಿದಿರಿ ಇದು ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸೂಕ್ತ ಗೌರವ ಸಲ್ಲುತ್ತಿಲ್ಲ ಎನಿಸುತ್ತಿದೆ.

ರವಿ , ಚಿತ್ರದುರ್ಗ 

ಹುಡುಗನಾಗಿ ನಾನು ಯಾಕೆ ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ ಎಂದರೆ ದಿನ ಸಂಜೆ 7 ಘಂಟೆಗೆ ಪ್ರಸಾರವಾಗುವ ಮಂಗಳ ಗೌರಿ ಮದುವೆ ಧಾರವಾಹಿ ಸಮಾಜಕ್ಕೆ ಏನು ಸಂದೇಶ ತಲುಪಿಸಲು ಹೊರಡುತಿದೆ  ಎಂಬುದು ತಿಳಿಯುತ್ತಿಲ್ಲ, ಮತ್ತು ಒಂದು ದೊಡ್ಡ ಕುಟುಂಬದ ಸೊಸೆಯಾದ ಸೌಂದರ್ಯ ಮನೆಯನ್ನೇ ನಾಶ ಮಾಡಲು ಹೊರಟಿದ್ದಾಳೆ ಇದು ಮನೆಯ ಜನಕ್ಕೆ ಏಕೆ ಅರ್ಥವಾಗುತ್ತಿಲ್ಲ. ಇವೆಲ್ಲ ನೋಡುಗರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬುದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here