ಸಾಮಾನ್ಯವಾಗಿ ನೋವು ಯಾವುದಾದರೂ ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿ ಸಿಗುವಂತಹ ವಿಗ್ರಹಗಳು ಮತ್ತು ದೇವರುಗಳ ಫೋಟೋಗಳನ್ನು ತೆಗೆದುಕೊಂಡು ಬರುತ್ತೇವೆ ಆದರೆ ಇವುಗಳನ್ನು ಮಂಟಪದಲ್ಲಿ ಇಡಬೇಕು ಅಥವಾ ಇಡಬಾರದು ಎಂಬ ಪ್ರಶ್ನೆಗೆ ಉತ್ತರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರುವುದಿಲ್ಲ ಒಂದು ವೇಳೆ ನಿಮಗೆ ತಿಳಿಯದೆ ಇಟ್ಟುಕೊಂಡಿದ್ದರು ಅಪಾಯ ತಪ್ಪಿದ್ದಲ್ಲ ಹಾಗೆ ಪುಣ್ಯ ಕ್ಷೇತ್ರವನ್ನು ಮುಗಿಸಿ ಬಂದವರು ಮನೆಗೆ ಹೋದಾಗ ಅವರು ಈ ವಿಗ್ರಹವನ್ನು ತೆಗೆದುಕೊಳ್ಳಿ ನಿಮ್ಮ ಮಂಟಪದಲ್ಲಿ ಇಟ್ಟು ಸದಾ ಪೂಜೆ ಮಾಡಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುವುದು ಎಂದು ಹೇಳುತ್ತಾರೆ.

ಅದೇ ಪ್ರಕಾರ ಮಾನವ ಸಹಜವಾಗಿ ದೇವರ ಭಕ್ತಿಯಿಂದ ಅದನ್ನು ತೆಗೆದುಕೊಳ್ಳುತ್ತಾನೆ ಅದನ್ನು ತಂದು ದೇವರ ಮಂಟಪದಲ್ಲಿಟ್ಟು ಸದಾ ಪೂಜಿಸುತ್ತಾನೆ ಆದರೆ ಕೆಲವು ದಿನ ಕಳೆದ ನಂತರ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತದೆ ಅದಕ್ಕೆ ಕಾರಣ ಏನು ಎಂಬುದು ಮಾತ್ರ ತಿಳಿದಿರುವುದಿಲ್ಲ ಇದನ್ನೆಲ್ಲ ನಾವು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಒಂದು ವೇಳೆ ನಿಮ್ಮ ದೇವರ ಮಂಟಪದಲ್ಲಿ ಯಾರಾದರೂ ಕೊಟ್ಟಿರುವ ವಿಗ್ರಹ ಅಥವಾ ಫೋಟೋ ಇದ್ದರೆ ಈ ಕ್ಷಣವೇ ತೆಗೆದುಬಿಡಿ ಯಾಕೆ ಅಂತ ಹೇಳ್ತೀವಿ ಮುಂದೆ ಓದಿ

ವಾಸ್ತು ಪ್ರಕಾರ ನಾವು ನೋಡುವುದಾದರೆ ಮನೆಯಲ್ಲಿ ಕಾಲಭೈರವನ ವಿಗ್ರಹ ಅಥವಾ ಫೋಟೋ ಯಾವುದು ಸಹ ಇಟ್ಟುಕೊಳ್ಳುವುದಿಲ್ಲ ಅದನ್ನು ಮನೆಯಲ್ಲಿ ಇಡಬಾರದು, ಕಾಲಭೈರವ ಅರ್ಥದಲ್ಲಿ ಶಿವನಾದರೂ ಆತನು ಕುಪಿತ ಬುದ್ಧಿಯವನು ಆದ್ದರಿಂದ ಮನೆಯಲ್ಲಿ ಕಾಲಭೈರವನ ವಿಗ್ರಹವನ್ನು ಫೋಟೋವನ್ನು ಇಟ್ಟುಕೊಳ್ಳಬೇಡಿ, ಹಾಗೆ ಸುಮಾರು ಜನ ನಟರಾಜನ ವಿಗ್ರಹವನ್ನು ಇಟ್ಟುಕೊಳ್ಳುತ್ತಾರೆ ಇದು ಇತ್ತೀಚಿಗೆ ಒಂದು ಟ್ರೆಂಡ್ ಆಗಿದೆ ಯಾರ ಮನೆಯಲ್ಲಿ ನೋಡಿದರೂ ನಟರಾಜನ ವಿಗ್ರಹ ಇದ್ದೇ ಇರುತ್ತದೆ ಇಟ್ಟುಕೊಳ್ಳುವುದು ತಪ್ಪಲ್ಲ ಆದರೆ ಅದನ್ನು ಪೂಜಿಸುವುದು  ತಪ್ಪು ಶಿವ ತಾಂಡವ ನೃತ್ಯ ಮಾಡುತ್ತಿರುವುದು ಇದರಿಂದ ಮನೆ ಮನಸ್ಸುಗಳಿಗೆ ಮನಸ್ತಾಪ ಕಲಹ ಉಂಟಾಗುತ್ತವೆ ಆದ್ದರಿಂದ ನಟರಾಜನ ವಿಗ್ರಹವನ್ನು ಕೇವಲ ಒಂದು ಶೋಗಾಗಿ ಇಟ್ಟುಕೊಳ್ಳಿ ಆದರೆ ಪೂಜಿಸಬೇಡಿ.

ಒಂದು ವೇಳೆ ನಿಮ್ಮ ಮನೆಯ ದೇವರು ಪರಮೇಶ್ವರ ಆಗಿದ್ದಲ್ಲಿ ಕಣ್ಣು ಮುಚ್ಚಿರುವ ಪರಮೇಶ್ವರನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪೂಜೆ ಮಾಡಬೇಡಿ ಬದಲಿಗೆ ಪಾರ್ವತಿ ಪರಮೇಶ್ವರ ಗಣಪತಿ ಸಹಿತ ಇರುವ ಫೋಟೋ ಇದ್ದರೆ ಒಳ್ಳೆಯದು ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತವೆ.

ಒಂದು ಮುಖ್ಯವಾದ ವಿಷಯವೇನೆಂದರೆ ನಿಮ್ಮ ಮಂಟಪದಲ್ಲಿ ಮೂರು ಇಂಚಿಗಿಂತ ದೊಡ್ಡದಾದ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ನೀವು ಆ ತರಹದ ವಿಗ್ರಹಗಳನ್ನು ಇಟ್ಟುಕೊಂಡಿದ್ದರೆ ಅದಕ್ಕೆ ತಕ್ಕನಾದ ಪೂಜೆ ಸಲ್ಲಬೇಕು ಸಂಸ್ಕಾರ ವಿಧಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂದರೆ ಮಾತ್ರ ನಿಮಗೆ ಶ್ರೇಯಸ್ಸು. ಈಗಿನ ಬ್ಯುಸಿ ಲೈಫ್ ಅಲ್ಲಿ ಯಾರಿಗೂ ಸಹ ಕಟ್ಟುನಿಟ್ಟಾಗಿ ಪೂಜೆ-ಪುನಸ್ಕಾರಗಳನ್ನು ಮಾಡಲು ಆಗುವುದಿಲ್ಲ ಆದ್ದರಿಂದ ದೇವರ ಮಂಟಪದಲ್ಲಿ ಆದಷ್ಟು ಮೂರು ಇಂಚಿಗಿಂತ ಚಿಕ್ಕದಿರುವ ವಿಗ್ರಹಗಳನ್ನು ಮಾತ್ರ ಇಟ್ಟುಕೊಳ್ಳಿ ಒಂದು ವೇಳೆ 3 inch ಗಿಂತ ಎತ್ತರ ಇರುವ ವಿಗ್ರಹಗಳನ್ನು ಆದಷ್ಟು ಮಂಟಪದಿಂದ ತೆಗೆದುಬಿಡಿ ಇದರಿಂದ ನಿಮಗೆ ಒಳ್ಳೆಯದು.

ನಿಮ್ಮ ಮನೆಯ ದೇವರ ಆರಾಧನೆಯನ್ನು ಮಾಡುತ್ತಲೇ ಇರಿ ನಿಮ್ಮ ಮನೆಯ ದೇವರಿಗೆ ಶ್ರದ್ಧಾಭಕ್ತಿಯಿಂದ ನೈವಿದ್ಯ ಪೂಜೆ-ಪುನಸ್ಕಾರಗಳನ್ನು ಮಾಡಿ ಆಶೀರ್ವಾದ ಪಡೆದುಕೊಳ್ಳಿ.

ಲೇಖನ:

ಜ್ಯೋತಿಷ್ಯರು ವಿಶ್ವನಾಥ ಶಾಸ್ತ್ರಿ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ ಕರೆ ಮಾಡಿ 9380281393

 

LEAVE A REPLY

Please enter your comment!
Please enter your name here