ಸಾವು ಹೇಗಾದರೂ ಬರಬಹುದು ಅದಕ್ಕೆ ಯಾವ ನಿಯಮಗಳು ಇಲ್ಲ. ಕೆಲವರು ತಾವಾಗಿಯೇ ಯಾವುದೊ ಕಾರಣಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಸಹಜವಾಗಿ ಸತ್ತವರನ್ನು ಹಳ್ಳಿಗಳಲ್ಲಿ ಚಟ್ಟ ಕಟ್ಟಿ ಅದರ ಮೇಲೆ ಹೆಣವನ್ನು ಕೂರಿಸಿಕೊಂಡು ಊರಿನಲ್ಲಿ ಮೆರವಣಿಗೆ ಮಾಡುತ್ತಾ, ಹಲಗಿ ಬಾರಿಸುತ್ತ ಮತ್ತು ಪಟಾಕಿಗಳನ್ನು ಸಿಡಿಸುತ್ತಾ ಹೆಣವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ ಹಾಗೆ ಹೋಗುವಾಗ ಹೆಣದ ಮೇಲೆ ೧-೨ ರೂ ನಾಣ್ಯಗಳನ್ನು ಎಸೆಯುತ್ತಾರೆ ಅದಕ್ಕೆ ಕಾರಣ ಹೀಗಿದೆ.

ಅನೇಕರು ಈ ರೀತಿ ಹೆಣದ ಮೇಲೆ ಚಿಲ್ಲರೆ ನಾಣ್ಯ ಹಾಕುವುದನ್ನು ಅಪಹಾಸ್ಯ ಮಾಡುವುದು ಉಂಟು, ಆದರೆ ಅದರ ಅಸಲಿ ಕಾರಣ ಹೀಗಿದೆ.

ಸುಡುಗಾಡಿಗೆ ಹೋಗುತ್ತಿರುವ ಈ ಹೆಣವು ತನ್ನ ಜೀವಿತಾವಧಿಯಲ್ಲಿ ಯಾರಿಗೂ ಸಹ ಒಂದು ರೂಪಾಯಿ ದಾನ  ಧರ್ಮ ಮಾಡಿಲ್ಲ ಎಲ್ಲವು ಸಹ ತನಗೆ ಬೇಕು ಎಂಬ ಸ್ವಾರ್ಥದಿಂದ ಕೂಡಿಟ್ಟಿದ್ದ. ಆದರೆ ತಾನು ಹೋಗುವಾಗ ಒಂದು ರೂಪಾಯಿಯನ್ನು  ತನ್ನ ಜತೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬುದು ಇದರ ಒಳಾರ್ಥವಾಗಿದೆ.

ಆದ್ದರಿಂದ ನಾವು ಈ ಮನುಷ್ಯನ ಹಣವನ್ನು ಬೀದಿಗೆ ಚೆಲ್ಲುತಿದ್ದೇವೆ ಎಂಬುದಾಗಿದೆ. ಮನುಷ್ಯ ಎಷ್ಟೇ ಬೇಕು ಅಂತ ಕುಡಿಯಿಟ್ಟರು ಒಂದಲ್ಲ ಒಂದು ದಿನ ಎಲ್ಲವನ್ನು ಬಿಟ್ಟು ಹೊರಡಲೇ ಬೇಕು. ಆದ್ದರಿಂದ ಇದ್ದಾಗಲೇ ಜನರು ಮೆಚ್ಚುವಂತ ಕೆಲಸ ಮಾಡ ಬೇಕು ಸತ್ತ ಮೇಲು ನಮ್ಮನ್ನು ನೆನೆದು ಮಾರ್ಗ ಬೇಕು.

LEAVE A REPLY

Please enter your comment!
Please enter your name here