ಹೌದು ನೀರು ಸಕಲ ಜೀವಜಂತುಗಳಿಗೂ ಬೇಕೇ ಬೇಕು. ಆಯುರ್ವೇದದಲ್ಲಿ ನೀರನ್ನು ಹೀಗೆ ಕುಡಿ ಬೇಕು ಅಂತ ಹೇಳುತ್ತಾರೆ. ನಾವು ಕೆಲವೊಂದು ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ಗಮನವೇ ಕೊಡುವುದಿಲ್ಲ. ಆದರೆ ಇದನ್ನೊಮ್ಮೆ ಓದಿ ನೀವು ತಿಳಿದುಕೊಳ್ಳಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ನೀವು ತಿನ್ನಲು ಕುಳಿತುಕೊಳ್ಳುವಂತೆ ನೀರು ಕುಡಿಯಲು ಕುಳಿತುಕೊಳ್ಳಿ, ಆದರೆ ನೆನಪಿರಲಿ ಒಂದೇ ಸರನೆ ಗಟಗಟನೆ ನೀರು ಕುಡಿಯ ಬೇಡಿ. ಒಂದೊಂದೇ ಗುಟುಕು ಕುಡಿಯಿರಿ ನೀರನ್ನು ನುಂಗಿ ಉಸಿರಾಡಿ ಮತ್ತೆ ಪುನರಾವರ್ತಿಸಿ.

ದಿನದ ಪೂರ್ತಿ ನೀರು ಕುಡಿಯುವುದು ತುಂಬಾ ಅವಶ್ಯವಾಗಿದೆ. ಒಂದೇ ಸರತಿ ಕುಡಿಯುವ ನೀರು ಮೂತ್ರದ ಮೂಲಕ ಹೊರ ಹೋಗಿ ಬಿಡುತ್ತದೆ. ಆದ್ದರಿಂದ ಹಾಗಾಗಿ ದೇಹಕ್ಕೆ ಉಪಯುಕ್ತವಾಗುವ ನೀರನ್ನು ಆಗಾಗ್ಗೆ ನೀರು ಕುಡಿಯಿರಿ.

ಅತೀಯಾದ ತಣ್ಣಗಿರುವ ನೀರು , ಐಸ್ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಮತ್ತು ಊಟ ಮಾಡುವಾಗ ಮಧ್ಯೆ ಮಧ್ಯೆ ಸ್ವಲ್ಪ ನೀರನ್ನು ಕುಡಿಯಿರಿ ಅಂದರೆ ೨೫% ಅಷ್ಟು ನೀರು ಊಟ ಮಾಡುವಾಗ ನಿಮ್ಮ ದೇಹದಲ್ಲಿ ಇರುತ್ತದೆ ಮತ್ತು ೫೦% ಅಷ್ಟು ಆಹಾರ ದೇಹಕ್ಕೆ ಹೋಗಬೇಕು, ಇನ್ನು ೨೫% ಹೊಟ್ಟೆ ಖಾಲಿಯಿರಬೇಕು ಅಂದರೆ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.

ನಿಮಗೆ ಬಾಯಾರಿಕೆಯಾದಾಗ ನೀರು ಕುಡಿಯಿರಿ. ನಾಲಿಗೆ ತುಟಿ ಕೊಡುವ ಸಂದೇಶವನ್ನು ಅಲಕ್ಷಿಸಬೇಡಿ ಮತ್ತು ನಂತರ ಕುಡಿದರಾಯಿತು ಎಂದು ಮುಂದೂಡಬೇಡಿ. ಯಾಕಂದರೆ ಗಂಟಲು, ತುಟಿಗಳು ತೇವಾಂಶದಿಂದ ಇದ್ದರೆ ಮಾತ್ರ ನಿಮ್ಮ ಧ್ವನಿ ಹೊರಗೆ ಬರಲು ಸಾಧ್ಯ.

ನಿಮ್ಮ ನಿದ್ರೆಯ ಮಧ್ಯೆ ಎಚ್ಚರವಾದಾಗ ನೀರು ಕುಡಿಯುವುದು ಆರೋಗ್ಯಕರ. ಮಲಗಿರುವಾಗ ನಿಮ್ಮ ದೇಹ ಚರ್ಮದ ಮುಖಾಂತರ ನೀರನ್ನು ಹೊರಹಾಕುತ್ತಿರುತ್ತದೆ. ಆದ್ದರಿಂದ ನೀರು ಎಚ್ಚರವಾದಾಗ ಕುಡಿಯುವುದು ಒಳಿತು.

LEAVE A REPLY

Please enter your comment!
Please enter your name here