ಕನ್ನಡ ನಾಡು ಕಂಡ ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಗುರುವಾರ ಬೆಳಗ್ಗೆ ಸ್ವರ್ಗವಾಸಿಗಳ ಆಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿರಣಯ್ಯ ಅವರು ಬೆಂಗಳೂರಿನ ಪ್ರಖ್ಯಾತ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ

ಪತ್ನಿ ಮತ್ತು ಐವರು ಮಕ್ಕಳನ್ನು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅವರ ಬನಶಂಕರಿಯಲ್ಲಿರುವ ನಿವಾಸಕ್ಕೆ ತರಲಾಗುತ್ತಿದೆ.

ಕಲ್ಚರಲ್ ಕಾಮೆಡಿಯನ್ ಎನಿಸಿಕೊಂಡಿದ್ದ ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಮಗನಾಗಿ 1934 ಫೆಬ್ರುವರಿ 15 ರಂದು ಮೈಸೂರಿನಲ್ಲಿ ಜನಿಸಿದರು ಇವರ ಮೂಲ ಹೆಸರು ನರಸಿಂಹಮೂರ್ತಿ

ತಂದೆಯಿಂದ ರಕ್ತಗತವಾಗಿ ಮೈಗೂಡಿಸಿಕೊಂಡ ರಂಗ ಕಲೆಯ ಕಲಾ ಪ್ರತಿಭೆಯನ್ನು ನಾಡಿನಾದ್ಯಂತ ಬಿತ್ತರಿಸಿದರು. ಇವರ ನಟನೆಗೆ ಮನ ಸೋತವರು ಅದೆಷ್ಟು ಜನರು.

ಸಮಾಜದ ಅಂಕುಡೊಂಕುಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದರು ಇವರ ಲಂಚಾವತಾರ, ಮಕ್ಮಲ್ ಟೋಪಿ, ಸದಾರಮೆ ಇನ್ನೂ ಮೊದಲಾದ ನಾಟಕಗಳು ಕರ್ನಾಟಕದ ಪ್ರತಿ ಮನೆ ಮಾತಾಗಿದೆ.

ತಂದೆಯವರ ಹಿರಣ್ಣಯ್ಯ ಮಿತ್ರ ಮಂಡಳಿ ಯನ್ನು ಮುಂದುವರೆಸಿಕೊಂಡು ಸಾವಿರಾರು ಕಡೆಗಳಲ್ಲಿ ಪ್ರದರ್ಶನ ನೀಡಿದ ಹೆಮ್ಮೆ ಹಿರಿಮೆ ಮಾಸ್ಟರ್ ಹಿರಣ್ಣಯ್ಯ ಅವರದ್ದು.

ಇಷ್ಟೇ ಅಲ್ಲದೆ ರಾಜಕಾರಣಿಗಳ ಬಗ್ಗೆ ನಟಿಸುತ್ತಿರುವ ವೇದಿಕೆಯ ಮೇಲೆಯೇ ಟೀಕಿಸಿ ಅನೇಕ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ಗಟ್ಟಿಗ ಹಿರಣ್ಣಯ್ಯ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಏರಿ ನ್ಯಾಯ ಪಡೆದವರು

ನಡುಬೀದಿ ನಾರಾಯಣ, ಪಶ್ಚಾತಾಪ, ಬ್ರಷ್ಟಾಚಾರ, ಚಪಲಅವತಾರ, ಡಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಯಚ್ಛಮ ನಾಯಕ, ಲಂಚಾವತಾರ ಎಲ್ಲವೂ ಸಹ ಜನ ಮನ ಗೆದ್ದು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಇರುವ ನಾಟಕಗಳು.

ಗುಬ್ಬಿ ವೀರಣ್ಣ ಪ್ರಶಸ್ತಿ ಭಾಜನರಾದ ಇವರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿಶ್ವಾದ್ಯಂತ ಸಾವಿರಾರು ಸನ್ಮಾನಗಳನ್ನು ಹಿರಣಯ್ಯ ಅವರು ಪಡೆದಿದ್ದಾರೆ.

LEAVE A REPLY

Please enter your comment!
Please enter your name here