ವಯಸ್ಸು ಆದ ಮೇಲೆ ಕೂದಲು ಬೆಳ್ಳಾಗುವುದು ಸಹಜ. ಆದರೆ ಈಗಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಅನ್ನದೆ ಕೂದಲು ಬೆಳ್ಳಾಗಾಗುವುತ್ತೀವಿ. ಸಾಧ್ಯವಾದಷ್ಟು ಹಸಿ ಸೊಪ್ಪು, ಮೊಳಕೆ ಕಟ್ಟಿರುವ ಕಾಳುಗಳು, ಸೀಸನ್ಗೆ ತಕ್ಕಂತ್ತೆ ಹಣ್ಣುಗಳ ಸೇವನೆ ಮಾಡಬೇಕು. ಮಕ್ಕಳ ಲಂಚ್ ಬಾಕ್ಸ್ ಗೆ ಆದಷ್ಟು ದೇಹಕ್ಕೆ ಶಕ್ತಿ ಬರುವಂತಹ ಆಹಾರಗಳ ಸೇವನೆಯ ಅಭ್ಯಾಸ ಮಾಡಿಸುವುದು ಉತ್ತಮ. ಇದರಿಂದ ಚಿಕ್ಕ ವಯಸಿನಲ್ಲಿ ಆಗುವ ನೆರೆ ಕೂದಲಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ತಡೆ ಹಿಡಿಯಬಹುದು.

ಇನ್ನ ಕೂದಲು ಕಪ್ಪಾಗಿಸಲು ಅನೇಕ ರೀತಿಯ ಕಲರಿಂಗ್ ಪೌಡರ ಗಳ್ಳನು ಬಳಸುತ್ತಾರೆ ಆ ಕ್ಷಣಕ್ಕೆ ಕೂದಲು ಕಪ್ಪಾದರು ಅದರಿಂದ ಅನೇಕ ರೀತಿಯ ಸಮಸ್ಯೆಗಳು ಅನುಭವಿಸಬೇಕಾಗುತ್ತದೆ, ಅದರಿಂದ ಹಿಂತಹ ಅಪಾಯಕಾರಿ ಕಲರಗಳನ್ನು ಬಳಸುವ ಮೊದಲು ಮನೆಯಲ್ಲಿ ಸಿಗುವ ಸಾಮಗ್ರಿಗಳಿಂದ ಎಣ್ಣೆ ತಯಾರಿಸಿಕೊಂಡು ಹಚ್ಚುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ. ಅದು ಯಾವ ಎಣ್ಣೆ ಹೇಗೆ ತಯಾರಿಸಬೇಕು ಎಂಬುವದನ್ನು ಈ ಕೆಳಗೆ ಓದಿ…

ಹಿರೇಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರಸಿ ೩-೪ ಗಂಟೆಗಳ ಕಾಲ ಕುದಿಸಬೇಕು, ಅದು ಕುದ್ದ ನಂತರ ಎಣ್ಣೆ ಕಪ್ಪು ಬಣಕ್ಕೆ ಬಂದ ಮೇಲೆ ಗ್ಯಾಸ್ ಆಫ್ ಮಾಡಬೇಕು ಅದು ತಣ್ಣಗಾದ ಮೇಲೆ ಒಂದು ಗಾಜಿನ ಬಾಟಲಿನಲ್ಲಿ ಶೇಖರಿಸಿ ಇಡಬೇಕು,ತಯಾರಿಸಿದ ಎಣ್ಣೆಯನ್ನು ನಿತ್ಯದಲ್ಲೂ ಕೂದಲಿಗೆ ಹಚ್ಚಬೇಕು.

ಆಲಿವ್ ಆಯಿಲ್ ಮತ್ತು ಎಳ್ಳಿನ ಎಣ್ಣೆಯನ್ನು ಕುಂಬಳ ಕಾಯಿಯ ರಸದೊಂದಿಗೆ ಚೆನ್ನಾಗಿ ಬೆರಿಸಿಕೊಳ್ಳಬೇಕು, ತಯಾರಿಸಿ ಇಟ್ಟುಕೊಂಡಿರುವ ಎಣ್ಣೆಯನ್ನು ದಿನಕ್ಕೆ ೨ ಬಾರಿ ತಲೆಯ ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುತ್ತ ಬಂದರೆ ಬಿಳಿ ಕೂದಲಿನ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ.

ಪೇರಲೆಯ ಎಲೆಗಳ್ಳನು ಬಿಸಿಲಿಗೆ ಇಟ್ಟು ನಂತರ ಆ ಎಲೆಗಳನ್ನು ಪುಡಿ ಮಾಡಿ ಕೊಳ್ಳಬೇಕು ಅದನ್ನು ನೀರಿಗೆ ಬೆರಿಸಿಕೊಂಡು ತಲೆ ಸ್ನಾನ ಮಾಡಬೇಕು. ಈರುಳ್ಳಿಯ ರಸ ಮತ್ತು ಅದರ ತಿರಳನ್ನು ತೆಗೆದುಕೊಂಡು ಸ್ನಾನಕ್ಕೆ ಮೊದಲು ತಲೆಗೆ ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಕೂದಲಿನ ಹೊಳಪು ಹೆಚ್ಚುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ಟೀ ಪುಡಿಯನ್ನು ನೀರಿನಲ್ಲಿ ಕುದಿಸಬೇಕು ಅದು ಆರಿದ ನಂತರ ತಲೆಗೆ ಹಚ್ಚಿಕೊಳ್ಳಬೇಕು ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಇದು ಶಾಂಪೂ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೆಹಂದಿ ಮತ್ತು ಮೊಸರನ್ನು ಸಮಪ್ರಮಾಣಕ್ಕೆ ತೆಗೆದುಕೊಂಡು ಎರಡನ್ನು ಮಿಕ್ಸ್ ಮಾಡಿ ವಾರಕ್ಕೆ ಒಂದು ಸಾರಿ ಹಚ್ಚಿಕೊಳ್ಳಬೇಕು.

ಬಾದಾಮಿ ಎಣ್ಣೆಯೊದಿಂಗೆ ನೆಲ್ಲೆಕಾಯಿಯ ಎಣ್ಣೆಯನ್ನು ಬೆರಸಿ ನಿತ್ಯದಲ್ಲೂ ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಸೊಂಪಾಗಿ ಬೆಳೆಯುವುದರ ಜೊತೆಗೆ ಬಿಳಿ ಕೂದಲು ಆಗುವುದಿಲ್ಲ ಕೂದಲು ಹೆಚ್ಚಾನು ಹೆಚ್ಚ್ಚು ಕಪ್ಪಗಿರುತ್ತವೆ.

ಒಂದು ಪಾತ್ರೆಯಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳು ಮತ್ತು ಅದರ ಜೊತೆಗೆ ಚಹಾದ ಸೊಪ್ಪನ್ನು ನೀರು ಹಾಕಿ ಚೆನ್ನಾಗಿ ಕುದಿಸಬೇಕು, ಅದು ಚೆನ್ನಾಗಿ ಕುದಿದ ಮೇಲೆ ತಣ್ಣಗಾಗಲು ಬಿಡಬೇಕು ನಂತರ ಅದು ಒಂದು ಹದಕ್ಕೆ ಬಂದ ಮೇಲೆ ಅದನ್ನು ಸೋಸಿಕೊಳ್ಳಬೇಕು ಸೋಸಿ ಇಟ್ಟುಕೊಂಡಿರುವ ರಸವನ್ನು ಚೆನ್ನಾಗಿ ತಲೆಗೆ ಹಚ್ಚಬೇಕು, ಅರ್ಧ ಅಥವಾ ಒಂದು ತಾಸು ಬಿಟ್ಟು ಸ್ನಾನ ಮಾಡಬೇಕು ಇದರಿಂದ ಕೂದಲು ಹೊಳಪು ಬರುವುದರ ಜೊತೆಗೆ ಬೇಗನೆ ಬಿಳಿ ಕೂದಲು ಆಗುವುದಿಲ್ಲ. ಅಲೋವೆರೆ ನಿತ್ಯದಲ್ಲೂ ಕೂದಲಿಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳಯುವುದರ ಜೊತೆಗೆ ಬೇಗನೆ ನೆರೆ ಬರುವುದಿಲ್ಲ.

LEAVE A REPLY

Please enter your comment!
Please enter your name here