ಪಪಾಯ ಅಥವಾ ಪರಂಗಿ ಎಂದು ಎರಡು ಹೆಸರಿನಲ್ಲಿ ಈ ಹಣ್ಣನು ಕರೆಯುತ್ತಾರೆ. ಈ ಹಣ್ಣಿನ ರುಚಿ ಅಷ್ಟಿಟ್ಟಲ್ಲ ತಿನ್ನುತಾ ಹೋದರೆ ಇನ್ನು ತಿನ್ನಬೇಕು ಅನಿಸುತ್ತದೆ, ಸಕ್ಕರೆಗಿಂತ ಸಿಹಿ ಆಗಿರುವ ಈ ಹಣ್ಣಿಗೆ ದೇವತೆಗಳ ಹಣ್ಣು ಅನ್ನುವ ಒಂದು ಅಧ್ಬುತವಾದ ಹೆಸರನ್ನು ಹೊಂದಿದೆ.

ಇದು ನಾರಿನ ಅಂಶ ಹೊಂದಿರುವ ಹಣ್ಣು ಅಷ್ಟೇ ಅಲ್ಲದೆ ಇದರಲ್ಲಿ ಪೊಟ್ಯಾಶಿಯಂ, ಮೆಗ್ನಿಶಿಯಂ, ನಿಯಾಸಿನ್ ಇನ್ನು ಹಲವಾರು ಅಂಶಗಳ್ಳನು ಇದು ಹೊಂದಿರುತ್ತದೆ. ಇಷ್ಟೇ ಅಲ್ಲದೆ ಇದು ಕಿಣ್ವ ಎಂಬ ಅಂಶವು ಅಧಿಕವಾಗಿರುವದರಿಂದ ಇದನ್ನು ನಿತ್ಯದಲ್ಲೂ ಸೇವಿಸುತ್ತಾ ಬಂದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.

ಸಕ್ಕರೆ ಕಾಯಿಲೆ ಇರುವವವರು ಕೂಡ ಈ ಹಣ್ಣಿನ ಸೇವನೆ ಮಾಡಬಹುದು ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ ಅಷ್ಟೇ ಅಲ್ಲದೆ ಇದು ವಿಟಮಿನ್- ಕೆ ಹೊಂದಿರುವುದರಿಂದ ಮೂಳೆಗಳು ಸದೃಢಗೊಳ್ಳುತ್ತವೆ. ಇದು ಆರ್ಥರೈಟಿಸ್ ಅನ್ನು ತಡೆಗಟ್ಟುತ್ತದೆ ಪಪಾಯ ಹಣ್ಣನು ಹೆಚಾಗ್ಗಿ ಯಾರು ತಿನ್ನುವವರು ಅವರಿಗೆ ಕೀಲುನೋವಿನ ಸಮಸ್ಯೆ ಕಾಡುವುದಿಲ್ಲ. ಪಪಾಯ ಹಣ್ಣನು ಮಕ್ಕಳಿಗೆ ಹೆಚ್ಚಾಗಿ ತಿನ್ನಿಸಬೇಕು ಇದರಿಂದ ಅವರಿಗೆ ಕಣ್ಣಿನ ಸಮಸ್ಯೆ ಕಾಡುವುದುದಿಲ್ಲ.

ಋತುಚಕ್ರದ ಸಮಸ್ಯೆ ಇದ್ದವರು ಪಪಾಯ ಹಣ್ಣಿನ ಜ್ಯೂಸ್ ಅಥವಾ ಹಸಿ ಪರಂಗಿ ಕಾಯಿಯ ರಸವನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಇಷ್ಟೇ ಅಲ್ಲದೆ ಇನ್ನು ಹಲವು ರೋಗಗಳಿಗೆ ಪಪಾಯ ಹಣ್ಣು ಒಳ್ಳೆಯ ಮದ್ದು ಅದು ಯಾವದು ಏನು ಇರಬಹುದು ಅಂತ ಈ ಕೆಳಗೆ ಓದಿ.

ತೂಕ ಇಳಿಸಲು ಇಷ್ಟ ಪಡುವವರು ಅಧಿಕವಾಗಿ ಪಪಾಯ ಹಣ್ಣನು ತಿನ್ನಬೇಕು ಇದರಿಂದ ದೇಹದಲ್ಲಿ ಬೇಡದಿರುವ ಕೊಬ್ಬನ್ನು ಕರಗಿಸುತ್ತದೆ ಅಷ್ಟೇ ಅಲ್ಲದೆ ಇದು ಕ್ಯಾಲೋರಿ ಕಡಿಮೆ ಹೊಂದಿರುವ ಹಣ್ಣು ಅದರಿಂದ ಸಾಧ್ಯವಾದಷ್ಟು ಪಪಾಯ ಹಣ್ಣನು ಹೆಚ್ಚಾಗಿ ತಿನ್ನಿ. ಇದು ವಿಟಮಿನ್ -ಸಿ ಮತ್ತು ಫೈಬರ್ ಇರುವ ಕಾರಣ ದೇಹದಲ್ಲಿ ಅನಗತ್ಯ ಕೊಬ್ಬು ಶೇಕರಿಸದಂತೆ ನೋಡಿಕೊಳ್ಳುತ್ತದೆ ಇದರಿಂದ ಹೃದಯಕ್ಕೆ ಸಂಬಂದ ಪಟ್ಟ ಕಾಯಿಲೆಗಳಿಂದ ದೂರ ಇರುವುದರ ಜೊತೆಗೆ ಹೈಪರ್ ಟೆನ್ಶನ್ ಅನ್ನು ಆಗದಂತ್ತೆ ನೋಡಿಕೊಳ್ಳುತ್ತದೆ.

ಪಪಾಯ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವ ಕಾರಣ ಇದನ್ನು ಸಕ್ಕರೆ ಕಾಯಿಲೆ ಹೊಂದಿದವರು ಯಾವದೇ ಭಯಪಡದೆ ತಿನ್ನಬಹುದು. ಕಟ್ ಮಾಡಿಕೊಂಡು ಸೇವಿಸಬಹುದ್ ಇಲ್ಲದೆ ಹೋದಲ್ಲೇ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಸಕ್ಕರೆ ಕಾಯಿಲೆ ಇಲ್ಲದವರು ಇದನ್ನು ಹೆಚ್ಚಾಗಿ ತಿನ್ನಬಹುದು.

ಪರಂಗಿ ಹಣ್ಣು ವಿಟಮಿನ್ -ಎ ಹೊಂದಿರುವ ಕಾರಣ ಇದನ್ನು ಮಕ್ಕಳಿಗೆ ಹೆಚ್ಚಾಗಿ ಕೊಡುವುದರಿಂದ ಅವರಿಗೆ ಕಣ್ಣಿ ಸಮಸ್ಯೆ ಕಂಡುಬರುವುದಿಲ್ಲ ಅಂದರೆ ಕಣ್ಣು ಮಂಜಾಗುವುದು, ಪೊರೆ ಬರುವುದು ಹೀಗೆ ಮೊದಲಾದ ಸಮಸ್ಯೆಗಳಿಂದ ಅವರನ್ನು ರಕ್ಷಿಸುತ್ತದೆ. ಮುಟ್ಟಿನ ಸಮಯದಲ್ಲಿ ನಾನಾ ವಿಧವಾದ ನೋವುಗಳು ಹೆಣ್ಣು ಮಕ್ಕಳನ್ನು ಕಾಡುತ್ತವೆ, ಹಂತಹ ಸಮಯದಲ್ಲಿ ಹೆಚ್ಚಾಗಿ ಹೊಟ್ಟೆ ನೋವು ಕಂಡು ಬಂದರೆ ಪಪಾಯ ಹಣ್ಣನು ಸೇವಿಸಿದರೆ ನೋವು ಶಮನಗೊಳ್ಳುತ್ತದೆ. ಇದರಲ್ಲಿರುವ ಪೆಪೇನ್ ಎಂಬ ಅಂಶ ಇರುವ ಕಾರಣ ಅದು ನೋವನ್ನು ಶಮನ’ಗೊಳಿಸುತ್ತದೆ.

ವಯಸ್ಸು ಆಗಿರುವಂತೆ ಕಾಣಲು ಯಾರು ಇಷ್ಟ ಪಡುವುದಿಲ್ಲ ಅದು ಹೆಣ್ಣು ಮಕ್ಕಳು ಇರಲಿ ಅಥವಾ ಗಂಡು ಮಕ್ಕಳು ಇರಬಹುದು, ಸಾಮನ್ಯವಾಗಿ ಎಲ್ಲರೂ ಅಂದವಾಗಿರಲು ಇಷ್ಟ ಪಡುತ್ತಾರೆ, ಆದರೆ ಅದನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೆ ಪಪಾಯ ಹಣ್ಣನು ನಿತ್ಯವು ತಿನ್ನುವುದರಿಂದ ವಯಸ್ಸು ಅದಂತ್ತೆ ಕಾಣವುದು ಕಡಿಮೆ ಮಾಡುತ್ತದೆ, ಇದಕ್ಕೆ ಕಾರಣ ಇದರಲ್ಲಿರುವ ವಿಟಮಿನ್- ಸಿ, ವಿಟಮಿನ್ -ಇ ಮತ್ತು ಬೀಟಾ ಕ್ಯಾರಟೀನ್ನಿಂದ ಮುಖದ ಮೇಲೆ ನೆರಿಗೆಗಳು ಮತ್ತು ಮುಪ್ಪು ಆಗದಂತ್ತೆ ತಡೆ ಹಿಡಿಯುತ್ತದೆ .ಕರುಳಿನ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ತಡೆಗಟ್ಟುವಂತಹ ಅಂಶವನ್ನು ಇದು ಹೊಂದಿದೆ.

ಪಪಾಯವನ್ನು ನಿತ್ಯದಲ್ಲೂ ಬಳಸಿದರೆ ಜೀರ್ಣ ಕ್ರಿಯೆಯ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ. ದಿನ ಪೂರ್ತಿ ವಿಶ್ರಾಂತಿ ಇಲ್ಲದೆ ದುಡಿದುಮನೆಗೆ ಬರುವವರಿಗೆ ಪಪಾಯ ಹಣ್ಣನು ತಿನ್ನಲು ಕೊಡಬೇಕು ಇಲ್ಲದೆ ಹೋದಲ್ಲೇ ಜ್ಯೂಸ್ ಮಾಡಿ ಕೊಡಬೇಕು ಇದರಿಂದ ಅವರ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ದಿನದ ಸುಸ್ತ್ತು ಕೂಡ ಕಡಿಮೆ ಆಗುತ್ತದೆ. ಇದಕ್ಕೆ ಕಾರಣ ಪಪಾಯ ಹಣ್ಣಿನಲ್ಲಿರುವ ವಿಟಮಿನ್ -ಸಿ ಎಂಬ ಅಂಶ.

LEAVE A REPLY

Please enter your comment!
Please enter your name here