ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲೂ ಸೌತೆಕಾಯಿ ಇದ್ದೆ ಇರುತ್ತದೆ, ಬೇಸಿಗೆಯಲ್ಲೂ ಅಂತೂ ಇದರ ಬಳಕೆ ಹೆಚ್ಚಾಗಿ ಇರುತ್ತೆ. ನೀರಿನ ಅಂಶ ಹೆಚ್ಚಾಗಿರುವ ಕಾರಣ ಇದನ್ನು ಬೇಸಿಗೆಯ ಕಾಲದಲ್ಲಿ ಸ್ವಲ್ಪ ಹೆಚ್ಚಾಗಿ ಬಳಸುತ್ತಾರೆ, ಇದರ ಜೊತೆಯಲ್ಲಿ ಮಾವಿನ ಕಾಯಿ ಸುಗ್ಗಿ ಕೂಡ ಶುರುವಾಗಿರುತ್ತೆ, ಮಾವಿನ ಕಾಯಿ ತೂರಿ ಮತ್ತು ಸೌತೆಕಾಯಿ ತುರಿಯನ್ನು ಮಿಶ್ರಣ ಮಾಡಿ ಕೋಸಂಬರಿ ತಿನ್ನುತ್ತಾರೆ.

ಇದರ ಜೊತೆಯಲ್ಲಿ ತಣ್ಣಗಿರುವ ಮಾವಿನ ಕಾಯಿ ಪಾನಕ ಇಲ್ಲವಾದಲ್ಲಿ ನಿಂಬೆ ಹಣ್ಣಿನ ಪಾನಕ ಸವಿಯುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲೂ ಹಬ್ಬದಲ್ಲಿ ಅಥವಾ ಯಾರಾದರೂ ಮನೆಗೆ ಬಂದಾಗ ಸಿಹಿ ಮಾಡುವ ಅಭ್ಯಾಸವಿರುತ್ತದೆ, ಇಲ್ಲದೆ ಹೋದಲ್ಲಿ ಸಾಮಾನ್ಯವಾಗಿ 15 ದಿವಸಕ್ಕೆ ಒಮ್ಮೆ ಸ್ವೀಟ್ ತಿನ್ನುವ ಅಭ್ಯಾಸ ಇರುತ್ತದೆ. ಕೆಲವರ ಮನೆಯಲ್ಲಿ. ಇನ್ನ ಯಾವದೇ ಕಾರ್ಯಕ್ರಮಕ್ಕೆ ಹೋದರೆ ಸಿಹಿ ಇಲ್ಲದೆ ಊಟ ಸಂಪೂರ್ಣವಾಗುವುದಿಲ್ಲ ಯಾಕೆ ಅಂತಾ ಹೇಳುವುದಾದರೆ ಸಿಹಿ ಶುಭದ ಸಂಕೇತ.

ಮನೆಯಲ್ಲಿ ಸಾಮಾನ್ಯವಾಗಿ ಶಾವಿಗೆ ಪಾಯಸ, ಗಸೆಗಸೆ ಪಾಯಸ, ಅಕ್ಕಿ ಪಾಯಸ ಹೀಗೆ ತಿಂದಿರುತ್ತೇವೆ ಆದರೆ ಈಗ ಸ್ವಲ್ಪ ಬೇರೆ ಪಾಯಸ ಸವಿಯೋಣ ಒಂದೇ ಟೇಸ್ಟ್ ತಿಂದು ಬೇಜಾರಾಗಿರುತ್ತೆ ಅಲ್ವಾ ಅದಕ್ಕೆ ಒಂದು ಸಲ ಸೌತೆಕಾಯಿ ಪಾಯಸ ಮಾಡಿ ರುಚಿ ಸವಿಯಿರಿ ಮಾಡೋದು ಹೇಗೆ ಅಂತೀರಾ ಚಿಂತೆ ಬೇಡ ಈ ಕೆಳಗೆ ಓದಿ…

ಸೌತೆಕಾಯಿ ಪಾಯಸ ಮಾಡಲು ಬೇಕಾಗಿರುವ ಸಾಮಗ್ರಿಗಳು

ಹಾಲು – 2 ಕಪ್.

ಏಲಕ್ಕಿ ಪುಡಿ – 2  ಚಮಚ.

ಹುರಿದ ಗೋಡಂಬಿ -ಸ್ವಲ್ಪ ನಿಮಗೆ ಬೇಕಯೆನಿಸಿದರೆ ಪಿಸ್ತಾ ಬಾದಾಮ್ ಚೂರುಗಳನ್ನು ಹಾಕಿಕೊಳ್ಳಬಹುದು.

ಸಕ್ಕರೆ – 1/4  ಕಪ್.

ಸಬ್ಬಕ್ಕಿ – 1/2 ಕಪ್ ( 1 ಗಂಟೆ ನೆನಿಸಿರಬೇಕು ).

ತುಪ್ಪ -5 – 6 ಚಮಚ.

ಸೌತೆಕಾಯಿ ಹೋಳುಗಳು -5 ಕಪ್ ( ಸಿಪ್ಪೆ ತೆಗೆದಿಬೇಕು ಮತ್ತು ಚಿಕ್ಕದಾಗಿ ಹೆಚ್ಚಿರಬೇಕು)

ಕಂಡೆನ್ಸೇ ಹಾಲು ( ಮಂದಗೊಳಿಸಿದ ಹಾಲು) -1/2  ಕಪ್.

ನಿಮ್ಮ ಅಳತೆಗೆ ತಕ್ಕಂತ್ತೆ ನೀರು ತೆಗೆದು ಕೊಳ್ಳಬೇಕು.

ತಯಾರಿಸುವ ವಿಧಾನ

ಮೊದಲಿಗೆ ಗ್ಯಾಸ್ ಮೇಲೆ ದಪ್ಪ ತಳದ ಪಾತ್ರೆಯಲ್ಲಿ ಸೌತೆಕಾಯಿ ಹೋಳುಗಳು ಮತ್ತು ನೆನಸಿರುವ ಸಬ್ಬಕ್ಕಿ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು, ಅದು ಬೆಂದ ಮೇಲೆ ಅದರಲ್ಲಿ ಮಿಕ್ಕಿರುವ ನೀರನ್ನು ಬಸಿದು ಕೊಳ್ಳಬೇಕು ನಂತರ ಅದಕ್ಕೆ ಸಕ್ಕರೆ ಹಾಕಬೇಕು, ಸಣ್ಣ ಉರಿಯಲ್ಲಿ ಸಕ್ಕರೆ ಕರುಗುವವರೆಗೂ ಬಿಡಬೇಕು, ಸಕ್ಕರೆ ಕರಿಗಿದ ಮೇಲೆ ಅದಕ್ಕೆ ಮಂದಗೊಳಿಸಿದ ಹಾಲು ಅಥವಾ ಕಂಡೆನ್ಸೇ ಮಿಲ್ಕ್ ಹಾಕಿ ಸಣ್ಣ ಉರಿಯಲ್ಲಿ 5 ರಿಂದ 10 ನಿಮಿಷ ಕುದಿಸಬೇಕು, ಅದಕ್ಕೆ ಏಲಕ್ಕಿ ಪುಡಿ ಹಾಕಿ ಮುಚ್ಚಳ ಮುಚ್ಚಿ ಇಡಬೇಕು.

ಒಂದೆರಡು ನಿಮಿಷ ಕುದಿಯಲು ಬಿಡಬೇಕು ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ನಿಮಗೆ ಇಷ್ಟವಾದರೆ ಬಾದಾಮ್ ಚೂರುಗಳು, ಪಿಸ್ತಾ ಚೂರುಗಳನ್ನು ಹಾಕಿ ಕೊಳ್ಳಬಹುದು ಈಗ ಗ್ಯಾಸ್ ಆಫ್ ಮಾಡಿ ಅದರ ಮೇಲೆ ತುಪ್ಪ ಹಾಕಿದರೆ ಸೌತೆಕಾಯಿ ಪಾಯಸ ಸವಿಯಲು ಸಿದ್ದ.

LEAVE A REPLY

Please enter your comment!
Please enter your name here