ಪ್ರತಿದಿನ ಏನ್ ತಿಂಡಿ ಮಾಡೋದು ಅನ್ನೋ ಗೊಂದಲ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ ಮಾಡಿದ ತಿಂಡಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟ ಆಗೋ ತರ ಇರಬೇಕು. ಬೆಳಗಿನ ತಿಂಡಿ ಹೆಚ್ಚಿನ ಪ್ರೊಟೀನ್ ಮತ್ತು ಪೋಷಕಾಂಶಗಳಿಂದ ಕೂಡಿರಬೇಕು ಪನ್ನೀರಿನಲ್ಲಿ ಹೆಚ್ಚು  ಕ್ಯಾಲ್ಸಿಯಂ ಮೆಗ್ನೇಶಿಯಂ ಮತ್ತು ಪ್ರೊಟೀನ್ ಗಳು ಇರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪನ್ನೀರ್ ಪರೋಟ ಮಾಡೋದು ತುಂಬಾನೇ ಸುಲಭ ಹೇಗೆ ಅಂತ ಮುಂದೆ ಓದಿ…

ಬೇಕಾಗಿರುವ ಪದಾರ್ಥ ಗಳು.

ಗೋಧಿ ಹಿಟ್ಟು ಎರಡು ಪಾವು

ಸಣ್ಣಗೆ ಹೆಚ್ಚಿದ ಈರುಳ್ಳಿ 1 ಕಪ್

ತುರಿದ ಪನ್ನೀರು 1 ಕಪ್

ಅಚ್ಚ ಮೆಣಸಿನ ಪುಡಿ 4 ರಿಂದ 5 ಸ್ಪೂನ್

ಗರಂ ಮಸಾಲ 1 ಸ್ಪೂನ್

ಧನಿಯ ಅರ್ಧ ಸ್ಪೂನ್

ಜೀರಿಗೆ 1 ಸ್ಪೂನ್

ಕೊತ್ತಂಬರಿ ಸೊಪ್ಪು ಸ್ವಲ್ಪ

ಬೆಣ್ಣೆ ಸ್ವಲ್ಪ

ಉಪ್ಪು ರುಚಿಗೆ ತಕ್ಕಷ್ಟು

ಮೊದಲು ಗೋಧಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು.

ಒಂದು ಬಾಣಲೆಯಲ್ಲಿ 4 ಸ್ಪೂನ್ ಎಣ್ಣೆ ಬಿಸಿಮಾಡಿ ಸಾಸಿವೆ ಜೀರಿಗೆಯನ್ನು ಹಾಕಿ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಾಡಿಸಬೇಕು.

ಈರುಳ್ಳಿ ಕೆಂಪಗಾದಾಗ ಅಚ್ಚ ಮೆಣಸಿನಪುಡಿ ಗರಂ ಮಸಾಲ ಧನಿಯಾ ಉಪ್ಪು ಹಾಕಿ ಕೈಯಾಡಿಸಿ ಎರಡು ನಿಮಿಷದ ನಂತರ ತುರಿದ ಪನ್ನೀರನ್ನು ಹಾಕಿ ಕೈಯಾಡಿಸಿ ಆರಲು ಬಿಡಿ.

ಆರಿದ ನಂತರ ಈ ಮಿಶ್ರಣವನ್ನು ಗೋಧಿ ಹಿಟ್ಟಿನ ಕಣಕ ದಲ್ಲಿ ಇಟ್ಟು ಲಟ್ಟಿಸಬೇಕು. ಪರೋಟ ದಪ್ಪಗಿದ್ದರೆ ಚೆನ್ನ.

ಬಿಸಿಯಾದ ಕಾವಲಿಯ ಮೇಲೆ ಬೆಣ್ಣೆ ಅಥವಾ ತುಪ್ಪವನ್ನು ಸವರಿ ಎರಡು ಕಡೆ ಬೇಯಿಸಬೇಕು.

ಇದು  ಮೊಸರು ಮತ್ತು ಉಪ್ಪಿನಕಾಯಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

LEAVE A REPLY

Please enter your comment!
Please enter your name here