ಹೌದು ಎಲ್ಲರಿಗೂ ಎಲ್ಲವೂ ಕೈಗೆ ಎಟುಕುವುದಿಲ್ಲ ಯಾವುದಾದರೂ ಒಂದು ಕೊರತೆ ಮನುಷ್ಯನನ್ನು ಕಾಡುತ್ತಲೇ ಇರುತ್ತದೆ ಆದರೆ ಆ ಕೊರತೆಯನ್ನು ಸಹ ಮೆಟ್ಟಿ ನಿಂತರೆ ಯಶಸ್ಸು ಎಂಬುದು ನಮ್ಮ ಪಾಲಾಗುತ್ತದೆ. ಮನಸಿದ್ದರೆ ಮಾರ್ಗ ಎಂಬಂತೆ ಮಂಜುನಾಥ್ ರಂಗಪ್ಪ ಅವರು ತಮ್ಮ ಸಾಧನೆಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಏನಪ್ಪಾ ಇವರು ಮಾಡಿರುವ ಅಂತಹ ದೊಡ್ಡ ಸಾಧನೆ ಅಂತ ನೀವು ಕೇಳುವುದಾದರೆ ಈ ಸ್ಟೋರಿನ ಕಂಪ್ಲೀಟ್ ಆಗಿ ಓದಿ

ಹೌದು ಮಂಜುನಾಥ ರಂಗಪ್ಪ ಗುರಡ್ಡಿ ಅವರು ಕೇವಲ ಓದಿದ್ದು ಹತ್ತನೇ ಕ್ಲಾಸು ಆದರೂ ಇವರ ಸಾಧನೆ ಮೆಚ್ಚುವಂಥದ್ದು ಇವರು ಮೂಲತಹ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಅವರು. ಇವರಿಗೆ ಯಾವುದೇ ಸ್ವಂತ ಜಮೀನಿಲ್ಲ, ಬೇರೆ ಏನಾದ್ರು ದುಡಿಮೆ ಮಾಡೋಣ ಅಂದ್ರೆ ಹೆಚ್ಚಿಗೆ ಕಲ್ತಿಲ್ಲ. ಊರು ಬಿಟ್ಟು ಊರಿಗೆ ಹೋಗಿ ಕೆಲಸ ಮಾಡೋಣ ಅಂದ್ರೆ ಮನಿ ಅವರನ್ನ ಬಿಟ್ಟು ಹೋಗೋಕೆ ಮನಸಿರಲಿಲ್ಲ ಆದ್ದರಿಂದ ಊರಲ್ಲೇ ಇದ್ದು ಏನಾದ್ರು ಮಾಡೋಣ ಅಂತ ಅಂದುಕೊಂಡರು ಇಲ್ಲ ಎಂದರೆ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿಬಿಡುತ್ತೆ ಅಂದ್ಕೊಂಡರು ಅದೇ ಅವರ ಈ ಸಾಧನೆಗೆ ಮೆಟ್ಟಿಲಾಯಿತು ಹೌದು ಕಷ್ಟ ಅಂತ ಬಂದಾಗ ಮಾತ್ರ ಮನುಷ್ಯ ಏನನ್ನಾದ್ರೂ ಸಾಧಿಸಲು ಮುಂದುವರೆಯುತ್ತಾನೆ .

ಅದೇ ರೀತಿ ಮಂಜುನಾಥ ಅವರು ಹಸು ಸಾಕಾಣಿಕೆಯ ಕುರಿತು ಸಾಕಷ್ಟು ವಿಚಾರ ಮಾಡಿ. ಅನಾದಿ ಕಾಲದಿಂದಲೂ ಹಸು ಸಾಕಾಣಿಕೆ ರೂಢಿಯಲ್ಲಿರುವುದರಿಂದ ಅದೇ ಕಸಬನ್ನು ಮಾಡುವುದಾಗಿ ನಿರ್ಧಾರ ಮಾಡಿದರು. ಅದರಂತೆ ೨೦೦೪ರಲ್ಲಿ ಸಾಲ ಮಾಡಿ ೧೮ ಸಾವಿರ ರೂಪಾಯಿಗೆ ಒಂದು ಹಸುವನ್ನು ಖರೀದಿಸಿದರು. ಇವರು ಸ್ವಂತಕ್ಕೆ ಭತ್ತದ ಹುಲ್ಲನ್ನು ತೆಗೆದುಕೊಳ್ಳಲು ಆಗದೆ ಅವರಿವರ ಹೊಲಗಳ ಬದಿಗಳಲ್ಲಿ ಬೆಳೆದ ಕಳೆ (ತ್ಯಾಜ್ಯ )ಹುಲ್ಲನ್ನು ಮೇಯಿಸುತಿದ್ದರು ಮತ್ತು ಅಲ್ಲಿ ಇಲ್ಲಿ ಸಿಗುವ ಹುಲ್ಲನ್ನು ತಂದು ಹಸು ಸಾಕುತ್ತಿದ್ದರು. ಇದರಿಂದ ಅವರಿಗೆ ಒಂದು ಜೀವನಕ್ಕೆ ಒಂದು ಆಧಾರ ದೊರೆಯಿತು.

ನಾವು ಯಶಸ್ಸಿನ ಮೆಟ್ಟಿಲು ತುಳಿಯ ಬೇಕು ಎಂದರೆ ಮೊದಲು ಕಷ್ಟದ ಮೆಟ್ಟಿಲುಗಳನ್ನು ಹತ್ತ ಬೇಕು ತದನಂತರ ನಮಗೆ ಯಶಸ್ಸಿನ ಮೆಟ್ಟಿಲುಗಳು ಸಿಗುತ್ತವೆ. ಅದೇ ರೀತಿ ಮಂಜುನಾಥ ಅವರು ಪಟ್ಟ ಶ್ರಮಕ್ಕೆ ದೇವರು ಫಲ ಕೊಟ್ಟಿದ್ದಾನೆ. ಆದ್ದರಿಂದ ಒಂದು ಹಸುವಿನಿಂದ ಶುರುವಾದ ಅವರ ಹೈನುಗಾರಿಕೆ ಇಂದು ೧೨ ಹಸು ಆಗಿವೆ.

ಹಸುಗಳನ್ನು ಉತ್ತಮವಾಗಿ ಮತ್ತು ಆರೋಗ್ಯಕರವಾಗಿ ನೋಡಿಕೊಂಡಿದ್ದಾರೆ ಇದರಿಂದ ಬೇರೆ ಕಡೆಯಿಂದ ಹಸು ತರುವ ಗೋಜು ಅವರಿಗಿಲ್ಲದೆ ತಮ್ಮ ಹಸುಗಳೇ ಸಂತಾನ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಕಾಲ ಬದಲಾದಂತೆ ಮಂಜುನಾಥ್ ಅವರು ಹೊಸ ತಂತ್ರಜ್ಞಾನಗಳತ್ತ ಹೆಜ್ಜೆ ಹಾಕಿದರೂ ಇದರಿಂದಲೂ ಸಹ ಅವರು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಇವರ ಕುಟುಂಬ ಸಹ ಇವರಿಗೆ ತುಂಬಾ ಸಹಕರಿಸುತ್ತಾರೆ ಆದ್ದರಿಂದ ಇವರು ಯಾವುದೇ ಅಳು ಕಳು ಗಳನ್ನೂ ಇಟ್ಟುಕೊಂಡಿಲ್ಲ. ಇದರಿಂದ ಹಣದ ಖರ್ಚು ಸಹ ಕಡಿಮೆ ಆಗುತ್ತದೆ ಮತ್ತು ಇವರು ಆಧುನಿಕವಾಗಿ ಸಿಗುವ ಎಲ್ಲ ತಂತ್ರಜ್ಞಾನಗಳನ್ನು ಬಳಸಿ ಉತ್ತಮವಾಗಿ ಹಸುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಹಸುಗಳು ಪ್ರತಿ ದಿನ ಸರಿಸುಮಾರು ೬೦ಲೀ ಹಾಲು ಕೊಡುತ್ತವೆ. ದಿನಕ್ಕೆ ಇವರು ಒಂದು ಸಾವಿರದ ವರೆಗೂ ಆದಾಯ ಪಡೆಯುತ್ತಿದ್ದಾರೆ. ಮತ್ತು ತಿಂಗಳ ಕೊನಿಗೆ ೩೦ ಸಾವಿರ ರೂಪಾಯಿ ಲಾಭವಾಗುತ್ತಿದೆ.

ಇವರ ಈ ಸಾಧನೆಗೆ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಮತ್ತು ರಾಜ್ಯದ ಹಲವು ರೈತ ತರಬೇತಿ ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವಗಳನ್ನು ಇತರರೊಂದಿಗೆ ಹಚ್ಚಿಕೊಂಡಿದ್ದಾರೆ. ಹಳ್ಳಿಯಿಂದ ದಿಲ್ಲಿ ಎಂಬ ನಾಡುನುಡಿ ಅಕ್ಷರಶಃ ಸತ್ಯ ಮಿತ್ರರೇ. ಅದಕ್ಕೆ ಉತ್ತಮ ಸಾಕ್ಷಿ ಮಂಜುನಾಥ್ ರಂಗಪ್ಪ ಗುರಡ್ಡಿ ಅವರು. ಮಂಜುನಾಥ್ ಅವರ ತಂದೆ ರಂಗಪ್ಪ ಅವರು ಈ ಇಳಿ ವಯಸ್ಸಿನಲ್ಲೂ ಕೂಡ ಪ್ರತಿ ದಿನ ಎರಡು ಬಾರಿ ಹುಲ್ಲಿನ ಹೊರೆ ಹೊತ್ತು ತರುತ್ತಾರೆ. ಮಗನಿಗೆ ತಂದೆಯ ಹೆಗಲು ಸದಾ ನೆರಳು ಅಲ್ಲವೇ…

LEAVE A REPLY

Please enter your comment!
Please enter your name here