ಕೀನ್ಯಾದ ಕಂಗಡಾ  ಗ್ರಾಮದ ಬಳಿ ದಟ್ಟ ಅರಣ್ಯವಿದೆ. ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಓಡಾಡಲು ರಸ್ತೆಯೇ ಇರಲಿಲ್ಲ ಅವರು ಕಾಡಿನ ಮಧ್ಯ ಹಾಸಿ ಓಡಾಡಬೇಕಿತ್ತು, ಜನರ ಕಷ್ಟವನ್ನು ನೋಡಲಾಗದೆ ಈ ವ್ಯಕ್ತಿ ಕೇವಲ ಆರೇ ದಿನಗಳಲ್ಲಿ ರಸ್ತೆಯನ್ನು ನಿರ್ಮಿಸಿದ್ದಾನೆ. ನಿಜಕ್ಕೂ ಇವನೊಬ್ಬ ನಾಯಕನೇ ಸರಿ ಹಾಗಾದ್ರೆ ಅವರು ಯಾರು ಅಂತೀರಾ ಮುಂದೆ ಓದಿ…

ರಸ್ತೆ ನಿರ್ಮಿಸಿದ ಮಾಂಜಿಯ ಕಥೆ ನಿಮಗೆಲ್ಲಾ ಗೊತ್ತೇ ಇದೆ ಆ ಮಾಂಜಿ ತನ್ನ ಹೆಂಡತಿಗಾಗಿ ರಸ್ತೆ ನಿರ್ಮಿಸಿದ ಆದರೆ ಈ ಮಾಂಜಿ  ಊರಿನ ಜನರಿಗೆ ನೆರವಾಗಲಿ ಎಂದು ರಸ್ತೆ ನಿರ್ಮಿಸಿದರು ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ.

ತನ್ನ ಬಳಿ ಸಾಕಷ್ಟು ಉಪಕರಣಗಳುಇಲ್ಲದಿದ್ದರು  ಇರುವಷ್ಟು ಉಪಕರಣ ಗಳಿಂದಲೇ ಕಡಿದಾದ ಗುಡ್ಡ ಕಾಡು ಇರುವ ಮಾರ್ಗದಲ್ಲಿ ಮರಗಳನ್ನು ಕಡಿದು ಬರೋಬ್ಬರಿ ಮುಚಮಿ  ಒಂದು ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿದ್ದಾರೆ.

ಇವರು ನಿರ್ಮಿಸಿರುವ ರಸ್ತೆ ಸಹಾಯದಿಂದ ಜನರು ಸುಲಭವಾಗಿ ರಸ್ತೆ ಬಳಸಿ ಶಾಪಿಂಗ್ ಸೆಂಟರ್ ಗೆ ಹಾಗೂ ಚರ್ಚ್ ಗಳಿಗೆ ಹೋಗಬಹುದಾಗಿದೆ. ಮುಚ್ಚಾಮಿ ಜನರ ಒಳಿತಿಗಾಗಿ ಅವರಿಗೆ ಸಹಾಯವಾಗಲಿ ಎಂದು ನಾನು ಈ ರಸ್ತೆಯನ್ನು ನಿರ್ಮಿಸಿದ್ದೇನೆ. ಎಂದು ಹೇಳುತ್ತಾರೆ ಈ ರಸ್ತೆ ನಿರ್ಮಿಸಲು ಮುಚಮಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಏಕಾಂಗಿಯಾಗಿ ಪ್ರತಿನಿತ್ಯ ಶ್ರಮ ವಹಿಸಿದ್ದಾರೆ.

 

LEAVE A REPLY

Please enter your comment!
Please enter your name here