ಸದ್ಯ ಚುನಾವಣಾ ಪ್ರಚಾರದಿಂದ ಕೊಂಚ ರಿಲೀಫ್ ಆದ ಮಾನ್ಯ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಇದೀಗ ರಿಲಾಕ್ಸಿಂಗ್ ಮೂಡ್ ಲಿದ್ದಾರೆ. ಉಡುಪಿಯ ಸಾಯಿರಾಧಾ ರೆಸಾರ್ಟ್ ಗೆ ಆಗಮಿಸಿದ್ದಾರೆ.

ಈ ವೇಳೆ ಮಾಧ್ಯಮದವರನ್ನು ಕಂಡು ಗರಂ ಆದ ಮುಖ್ಯಮಂತ್ರಿಗಳು ಯಾರೀ ಇವರೆನ್ನಲಾ ಒಳ್ಗೆ ಬಿಟ್ಟವರು ? ಕಾಮನ್ ಸೆನ್ಸ್ ಇಲ್ವಾ ಅಂತ ಕೂಗಾಡಿದ್ದಾರೆ. ಇದು ಖಾಸಗಿ ಕಾರ್ಯಕ್ರಮ ಅಂತ ಗೊತ್ತಿಲ್ವ ? ಯಾರು ಮಾಧ್ಯಮದವರಿಗೆ ಮಾಹಿತಿ ಕೊಟ್ಟವರು ಎಂದು ರೇಗಿದ್ದಾರೆ .

ಹೆರಿಟೇಜ್ ರೆಸಾರ್ಟ್ ಆದ ಕಾಪು ಮೂಳೂರಲ್ಲಿ ರುವ ಸಾಯಿರಾಧಾ ಹೆಲ್ತ್ ರೆಸಾರ್ಟ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸಿದ್ದು, ಧ್ಯಾನ ಮತ್ತು ಪಂಚಕರ್ಮ ಚಿಕಿತ್ಸೆ ಕೂಡ ವ್ಯವಸ್ಥೆ ಮಾಡಲಾಗಿದ್ದು, ಅದರ ಜತೆ ಆಯಿಲ್ ಮಸಾಜ್, ಯೋಗ ಕೂಡ ತೆಗೆದುಕೊಳ್ಳಲಿದ್ದಾರೆ. ಪ್ರಚಾರದಿಂದ ಸುಸ್ತ ಆದ ಮುಖ್ಯಮಂತ್ರಿ ಅವರು ಸದ್ಯ ಎರಡು ದಿನಗಳ ಕಾಲ ಅಲ್ಲಿಯೇ ತಂಗಿ ಫುಲ್ ರಿಲ್ಯಾಕ್ಸ್ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here